No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Wednesday, March 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ವಿಜಯಪುರ

ಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್’ನಲ್ಲಿ ದಾಖಲೆ ಬರೆದ `ನಾರಾಯಣ ಹೆಲ್ತ್ ಸಿಟಿ’

ಉತ್ತರ ಕರ್ನಾಟಕ ಮಕ್ಕಳಿಗೆ ಬದುಕು ನೀಡಿದ ಆಸ್ಪತ್ರೆ | ನೀವೂ ಸಹ ಉಪಯೋಗ ಪಡೆದುಕೊಳ್ಳಬಹುದು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 9, 2025
in ವಿಜಯಪುರ
0
ಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್’ನಲ್ಲಿ ದಾಖಲೆ ಬರೆದ `ನಾರಾಯಣ ಹೆಲ್ತ್ ಸಿಟಿ’
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಜಯಪುರ  |

ವಿಶ್ವದರ್ಜೆಯ ಚಿಕಿತ್ಸೆ ಒದಗಿಸುವ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆ ಆಗಿರುವ ನಾರಾಯಣ ಹೆಲ್ತ್ ಸಿಟಿಯು #NarayanaHealthCity ಗಂಭೀರವಾದ ರಕ್ತ ಮತ್ತು ರೋಗನಿರೋಧಕ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ #PediatricStemCellTransplantation ಮೂಲಕ ಚಿಕಿತ್ಸೆ ನೀಡಿ ಅತ್ಯುತ್ತಮ ಸಾಧನೆ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ.

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಹೆಮಟೋ-ಆಂಕಾಲಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್, ಪೀಡಿಯಾಟ್ರಿಕ್ ಆಂಕಾಲಜಿ ಕನ್ಸಲ್ಟೆಂಟ್ ಡಾ. ಶೋಭಾ ಬಡಿಗೇರ್ ಅವರು ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ #NorthKarnataka ಭಾಗದ ಜಿಲ್ಲೆಗಳ ಮಕ್ಕಳಿಗೆ ಯಶಸ್ವಿಯಾಗಿ ಈ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗಳನ್ನು ನಡೆಸಿದ್ದಾರೆ ಮತ್ತು ಆ ಮೂಲಕ ಅದೆಷ್ಟೋ ಕುಟುಂಬಗಳ ಮನೆಗೆ ಆಶಾಕಿರಣವಾಗಿ ಮೂಡಿಬಂದಿದ್ದಾರೆ.

ಈ ಮಕ್ಕಳ ಪೈಕಿ ಕೆಲವರು ಗಂಭೀರವಾದ ಥಲಸ್ಸೇಮಿಯಾ ಮೇಜರ್ (ಇದು ಹುಟ್ಟಿನಿಂದಲೇ ಬರುವ ಗಂಭೀರ ರಕ್ತ ಸಮಸ್ಯೆಯಾಗಿದ್ದು, ಆಗಾಗ ರಕ್ತ ವರ್ಗಾವಣೆಯ ಅಗತ್ಯ ಇರುತ್ತದೆ), ಜಿ6ಪಿಐ ಕೊರತೆ (ರಕ್ತದ ಕೆಂಪು ರಕ್ತಕಣಗಳು ನಾಶವಾಗುವ ಆನುವಂಶಿಕ ಕಾಯಿಲೆ), ಅಪ್ಲಾಸ್ಟಿಕ್ ಎನಿಮಿಯಾ #AplasticAnemia (ಅಸ್ಥಿ ಮಜ್ಜೆಯು ಕೆಂಪು ರಕ್ತಕಣಗಳ ಉತ್ಪಾದನೆಯನ್ನು ನಿಲ್ಲಿಸುವ ಸಂಕೀರ್ಣ ಸ್ಥಿತಿ) ಮತ್ತು ಗಂಭೀರ ಪ್ಲೇಟ್ಲೆಟ್ ಸಮಸ್ಯೆಗಳಂತಹ ತೊಂದರೆಗಳಿಂದ ಬಳಲುತ್ತಿದ್ದವು. ಅಂಥಾ ಮಕ್ಕಳಿಗೆ ಈ ಜೀವರಕ್ಷಕ ಚಿಕಿತ್ಸೆ ನೀಡಿ ಅವರ ಜೀವವನ್ನು ನಾರಾಯಣ ಹೆಲ್ತ್ ಸಿಟಿ ಕಾಪಾಡಿದೆ.
ಈ ಕುರಿತಂತೆ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ. ಬಡಿಗೇರ್ ಅವರು, ನಾವು ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ ಮಾಡಿದ ಅತ್ಯಂತ ಚಿಕ್ಕ ರೋಗಿಯ ವಯಸ್ಸು 1.5 ವರ್ಷ ಆಗಿದೆ. ಹಿರಿಯ ರೋಗಿಯ ವಯಸ್ಸು 13 ಆಗಿದೆ. ಅದರಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ದಾನಿ ಎಂದರೆ ಎಂಟು ತಿಂಗಳ ಮಗು ಆಗಿದ್ದು, ದೊಡ್ಡ ವಯಸ್ಸಿನ ದಾನಿ 51 ವರ್ಷದವರು. ಈಗ ಎಲ್ಲರೂ ಚೆನ್ನಾಗಿ ಇದ್ದಾರೆ ಎಂದು ಹೇಳಿದರು.

ಅವರು ಅಪ್ಲಾಸ್ಟಿಕ್ ಎನಿಮಿಯಾ (ಬೋನ್ ಮ್ಯಾರೋ ಫೇಲ್ಯೂರ್), ಇಮ್ಯುನೋ ಡೆಫಿಶಿಯನ್ಸಿ ಡಿಸಾರ್ಡರ್’ಗಳು (ದುರ್ಬಲ ರೋಗ ನಿರೋಧಕ ವ್ಯವಸ್ಥೆ) ಮತ್ತು ಗಂಭೀರ ಪ್ಲೇಟ್ ಲೆಟ್ ಸಮಸ್ಯೆಗಳು ಕಂಡು ಬಂದ ಮಕ್ಕಳಲ್ಲಿ ಉತ್ತಮ ಫಲಿತಾಂಶ ಪಡೆಯಲು ರೋಗ ನಿರ್ಧಾರದ ನಂತರ ತಕ್ಷಣ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ ಎಂದರೇನು?
ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ (ನಾಶ ಹೊಂದಿದ ರಕ್ತ ಉತ್ಪಾದಿಸುವ ಜೀವಕೋಶಗಳನ್ನು ಆರೋಗ್ಯಕರ ಜೀವಕೋಶಗಳಿಂದ ಬದಲಾಯಿಸುವುದು) ಅನ್ನು ಮುಂಚಿತವಾಗಿ ಮಾಡಿಸಿದರೆ ಯಶಸ್ಸಿನ ಪ್ರಮಾಣ ಶೇ.80ಕ್ಕಿಂತ ಜಾಸ್ತಿ ಇರುತ್ತದೆ. ಅಲೋಜೆನಿಕ್ ಎಚ್’ಎಸ್’ಸಿಟಿ (ದಾನಿಯ ಸ್ಟೆಮ್ ಸೆಲ್’ಗಳನ್ನು ಬಳಸುವುದು) ಚಿಕಿತ್ಸೆ ಮೂಲಕ ಥಲಸ್ಸೇಮಿಯಾ ಮೇಜರ್, ಅಪ್ಲಾಸ್ಟಿಕ್ ಎನಿಮಿಯಾ, ಗಂಭೀರ ಪ್ಲೇಟ್ ಲೆಟ್ ಸಮಸ್ಯೆಗಳು, ಜಿ6ಪಿಐ ಕೊರತೆ, ಪ್ರಾಥಮಿಕ ರೋಗನಿರೋಧಕ ಸಮಸ್ಯೆ ಮತ್ತು ಹೈ- ರಿಸ್ಕ್ ಅಥವಾ ಮತ್ತೆ ಬರಬಹುದಾದ ಲ್ಯುಕೇಮಿಯಾಗೆ ಚಿಕಿತ್ಸೆ ಮಾಡಬಹುದಾಗಿದೆ. ಆಟೋಲಾಗಸ್ ಟ್ರಾನ್ಸ್ ಪ್ಲಾಂಟ್ ಮಾಡುವ ಮೂಲಕ ಹೈ-ರಿಸ್ಕ್ ನ್ಯೂರೋಬ್ಲಾಸ್ಟೋಮಾ #HighRiskNeuroblastoma ಮತ್ತು ಮೆಡ್ಯುಲೋಬ್ಲಾಸ್ಟೋಮಾದಂತಹ ಕ್ಯಾನ್ಸರ್’ಗಳಿಗೆ ಚಿಕಿತ್ಸೆ ನೀಡಬಹುದು ಎಂದರು.
ವೈದ್ಯಕೀಯ ತಜ್ಞರು ಆರಂಭಿಕ ಹಂತದಲ್ಲಿ ರೋಗ ಪತ್ತೆ ಮಾಡುವ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವ ಮಹತ್ವದ ಕುರಿತು ಹೇಳುತ್ತಾರೆ. ಇದರಿಂದ ನಿರ್ದಿಷ್ಟವಾಗಿ ಲಿವರ್, ಹೃದಯ ಮತ್ತು ಬೋನ್ ಮ್ಯಾರೋ ಸೇರಿದಂತೆ ಅಂಗಾಂಗಳು ಹಾನಿ ಆಗುವುದನ್ನು ತಡೆಯಬಹುದಾಗಿದೆ.

ಥಲಸ್ಸೇಮಿಯಾ ಮೇಜರ್ ಸಮಸ್ಯೆ ಇದ್ದಾಗ ಯಾವುದೇ ಅಂಗಗಳ ಗಾಯವಿಲ್ಲದಿದ್ದರೆ 18 ತಿಂಗಳುಗಳಿಂದ ಏಳು ವರ್ಷಗಳ ನಡುವಿನ ಮಕ್ಕಳಿಗೆ ಟ್ರಾನ್ಸ್ ಪ್ಲಾಂಟ್ ಮಾಡುವುದು ಉತ್ತಮ. ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಅಂಗಾಂಗಗಳ ಹಾನಿ ಇಲ್ಲದಿದ್ದರೆ ಟ್ರಾನ್ಸ್ ಪ್ಲಾಂಟೇಶನ್ ಮಾಡಬಹುದು. ರೋಗಿಯ ಪರಿಸ್ಥಿತಿಗೆ ತಕ್ಕಂತೆ ಟ್ರಾನ್ಸ್ ಪ್ಲಾಂಟೇಶನ್ ಪ್ರಕ್ರಿಯೆಯು ಎಂಟು ತಿಂಗಳುಗಳಿಂದ ಒಂದು ವರ್ಷದವರೆಗೆ ನಡೆಯಬಹುದು ಎನ್ನುತ್ತಾರೆ ಡಾ. ಶೋಭಾ.

ಸ್ಫೂರ್ತಿ ಕಥೆಗಳು
ಥಲಸ್ಸೇಮಿಯಾ ಮೇಜರ್‌ಇರುವ ಎರಡು ವರ್ಷದ ಬಾಲಕನಿಗೆ ಅವನ ಪುಟಾಣಿ ಸಹೋದರಿಯ ಸ್ಟೆಮ್ ಸೆಲ್’ಗಳನ್ನು ಬಳಸಿ ಟ್ರಾನ್ಸ್ ಪ್ಲಾಂಟ್ ಮಾಡಲಾಯಿತು. ಟ್ರಾನ್ಸ್ ಪ್ಲಾಂಟ್ ಮಾಡಿದ ನಂತರ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಆಗಿದ್ದು, ಇಬ್ಬರೂ ಸ್ಟೆಮ್ ಸೆಲ್ ಸ್ವೀಕರಿಸಿದವರು ಮತ್ತು ದಾನ ಮಾಡಿದವರು ಇಬ್ಬರೂ ಆರೋಗ್ಯಕರವಾಗಿದ್ದಾರೆ.

ಗ್ಲಾಂಜ್‌ಮ್ಯಾನ್‌ಸ್ ಥ್ರೊಂಬಾಸ್ಥೇನಿಯಾ (ಹುಟ್ಟಿನಿಂದಲೇ ಬರುವ ಗಂಭೀರ ಪ್ರಮಾಣದ ಪ್ಲೇಟ್ ಲೆಟ್ ಸಮಸ್ಯೆ) ಸಮಸ್ಯೆ ಇರುವ ಬಾಲಕಿಯೊಬ್ಬಳು ಬಾಲ್ಯದಿಂದಲೇ ರಕ್ತಸ್ರಾವ ಸಮಸ್ಯೆಯನ್ನು ಎದುರಿಸುತ್ತಿದ್ದಳು. 13 ವರ್ಷಗಳ ಹಿಂದೆ ಅವಳ ಸಹೋದರಿ ದಾನಿಯಾಗಿದ್ದು, ಯಶಸ್ವಿಯಾಗಿ ಟ್ರಾನ್ಸ್ ಪ್ಲಾಂಟ್ ಮಾಡಿಸಲಾಯಿತು. ಈಗ ಆಕೆ ಪಿಯುಸಿ ಎರಡನೇ ವರ್ಷದ ಪರೀಕ್ಷೆಗೆ ತಯಾರಿ ಮಾಡುತ್ತಿದ್ದು, ವೈದ್ಯಳಾಗಲು ಬಯಸುತ್ತಿದ್ದಾಳೆ.ಇನ್ನೊಬ್ಬ ಥಲಸ್ಸೇಮಿಯಾ ಮೇಜರ್ ಇರುವ ಶಿಶುವಿಗೆ ಹ್ಯಾಪ್ರೋಐಡೆಂಟಿಕಲ್ (ಅರ್ಧ ಹೊಂದಾಣಿಕೆ) ಟ್ರಾನ್ಸ್ ಪ್ಲಾಂಟ್ ಮಾಡಲಾಗಿದ್ದು, ಎರಡು ವರ್ಷಗಳಿಂದ ರೋಗಮುಕ್ತನಾಗಿದ್ದಾನೆ.

ಟ್ರಾನ್ಸ್ ಫ್ಯುಶನ್ ಅಗತ್ಯವಿರುವ ಜಿ6ಪಿಐ ಡೆಫಿಶಿಯೆನ್ಸಿ ಸಮಸ್ಯೆ ಇರುವ ಎರಡು ಸಹೋದರರಿಗೆ, ಅವರ ಸಹೋದರಿಯಿಂದ ಸ್ಟೆಮ್ ಸೆಲ್ ಪಡೆದು ಚಿಕಿತ್ಸೆ ನೀಡಲಾಯಿತು. ಈಗ ಆ ಸಹೋದರಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮೂರು ಸಹೋದರ, ಸಹೋದರಿಯರೂ ಚೆನ್ನಾಗಿದ್ದಾರೆ.

ಈ ಪ್ರದೇಶದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸಲು ಡಾ. ಶೋಭಾ ಬಡಿಗೇರ್ ಅವರು ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿಯಲ್ಲಿ ನಿಯಮಿತವಾಗಿ ಹೊರರೋಗಿಗಳ ಕ್ಲಿನಿಕ್ ಗಳನ್ನು ನಡೆಸುತ್ತಾರೆ. ಈ ಕುರಿತು ಅವರು, ಈ ರೀತಿಯ ಕ್ಲಿನಿಕ್ ನಡೆಸುವುದರಿಂದ ಚಿಕಿತ್ಸೆಯ ಅಗತ್ಯವಿರುವ ಮಕ್ಕಳನ್ನು ಗುರುತಿಸಲು, ಅವರ ಕುಟುಂಬಗಳಿಗೆ ಕೌನ್ಸೆಲಿಂಗ್ ನೀಡಲು ಮತ್ತು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ತಕ್ಷಣ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಲು ಸಹಾಯ ಮಾಡಬಹುದು ಎಂದು ಹೇಳಿದರು.

ಬೆಂಗಳೂರು ನಾರಾಯಣ ಹಾಸ್ಪಿಟಲ್ ಕನ್ಸಲ್ಟೆಂಟ್ ಎ.ಆರ್. ಗೋಪಾಲ್, ನಾರಾಯಣ ಹೆಲ್ತ್ ಹಿರಿಯ ಮಾರುಕಟ್ಟೆ ಅಧಿಕಾರಿ ಕಾಶೀನಾಥ ಎಸ್. ಕೋರೆಗೋಳ ಸೇರಿದಂತೆ ಹಲವರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: Aplastic anemiaHigh-risk neuroblastomaNarayana Health CityPediatric Stem Cell TransplantationThalassemia majorWorld-class treatmentಉತ್ತರ ಕರ್ನಾಟಕಕಲಬುರಗಿಥಲಸ್ಸೇಮಿಯಾ ಮೇಜರ್ನಾರಾಯಣ ಹೆಲ್ತ್ ಸಿಟಿಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ಬಾಗಲಕೋಟೆರಾಯಚೂರುವಿಜಯಪುರವಿಶ್ವದರ್ಜೆ ಚಿಕಿತ್ಸೆ
Share196Tweet123Send
Previous Post

20 ಮಕ್ಕಳನ್ನು ಬಲಿ ಪಡೆದ ಕೆಮ್ಮಿನ ಸಿರಪ್ ಕಂಪೆನಿ ಮಾಲೀಕ ಅರೆಸ್ಟ್

Next Post

ಹುಬ್ಬಳ್ಳಿ, ಬೆಂಗಳೂರು, ವಿಜಯಪುರ ನಡುವೆ ವಿಶೇಷ ರೈಲು | ಯಾವತ್ತು? ಎಲ್ಲೆಲ್ಲಿ ನಿಲುಗಡೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಮನಿಸಿ! ಹುಬ್ಬಳ್ಳಿ-ಹೃಷಿಕೇಶ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು | ಮಾರ್ಗ ಯಾವುದು?

ಹುಬ್ಬಳ್ಳಿ, ಬೆಂಗಳೂರು, ವಿಜಯಪುರ ನಡುವೆ ವಿಶೇಷ ರೈಲು | ಯಾವತ್ತು? ಎಲ್ಲೆಲ್ಲಿ ನಿಲುಗಡೆ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

March 18, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಶುಭಹಾರೈಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಶುಭಹಾರೈಕೆ

March 18, 2026
ಸಂತುಷ್ಟರಾಗಿ ವರಗಳನ್ನು ನೀಡುವ ಶ್ರೀ ಸತ್ಯ ಸಂತುಷ್ಟ ತೀರ್ಥರು

ಸಂತುಷ್ಟರಾಗಿ ವರಗಳನ್ನು ನೀಡುವ ಶ್ರೀ ಸತ್ಯ ಸಂತುಷ್ಟ ತೀರ್ಥರು

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL