ಜೈಪುರ: ನಾರಿ ಶಕ್ತಿ(ಮಹಿಳಾ ಸಬಲೀಕರಣ) ಪದಕ್ಕೆ ಈಗ ಜಾಗತಿಕ ಮನ್ನಣೆ ದೊರೆತಿದ್ದು, ಆಕ್ಸ್ವರ್ಡ್ ಡಿಕ್ಷನರಿಯು 2018ರ ವರ್ಷದ ಹಿಂದಿ ಪದ ಎಂದು ಘೋಷಣೆ ಮಾಡಿದೆ.
ಸಂಸ್ಕೃತದಿಂದ ಈ ಪದವನ್ನು ವಿಭಾಗ ಮಾಡಲಾಗಿದ್ದು, ನಾರಿ ಅಂದರೆ ಮಹಿಳೆ/ಸ್ತ್ರೀ ಹಾಗೂ ಶಕ್ತಿ ಎಂದರೆ ಪವರ್/ಬಲ ಎಂಬರ್ಥವಾಗಿದ್ದು, ಇದನ್ನು ಸ್ತ್ರೀಯರು ಸ್ವತಂತ್ರಯವಾಗಿ ಬದುಕುವ ಅಥವಾ ಮಹಿಳಾ ಸಬಲೀಕರಣವಾಗುತ್ತಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.
ಈ ಘೋಷಣೆಯನ್ನು ಜೈಪುರ್ ಸಾಹಿತ್ಯ ಉತ್ಸವದಲ್ಲಿ ಮಾಡಲಾಗಿದ್ದು, ಅಂತಾರಾಷ್ಟಿಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ 2018ರ ಮಾರ್ಚ್’ನಲ್ಲಿ ನಾರಿ ಶಕ್ತಿ ಪುರಸ್ಕಾರವನ್ನು ಕೇಂದ್ರ ಸರ್ಕಾರ ನೀಡಲು ನಿರ್ಧರಿಸಿತ್ತು.
ಆಕ್ಸ್ವರ್ಡ್ ನಿಘಂಟುಗಳು ಭಾಷೆಯ ಚ್ಯಾಂಪಿಯನ್ ಕ್ರಿತಿಕಾ ಅಗರ್ವಾಲ್ ಈ ಬಗ್ಗೆ ಮಾತನಾಡಿದ್ದು, ನಾರಿ ಶಕ್ತಿ ಅಥವಾ ಮಹಿಳಾ ಶಕ್ತಿ 2018 ರಲ್ಲಿ ಮುಂಚೂಣಿಗೆ ಬಂದ ಮಹಿಳಾ ನವೀಕೃತ ಶಕ್ತಿಗೆ ಪ್ರತಿಬಿಂಬಿಸುತ್ತದೆ. ಇದು ಮಹಿಳೆಯರು ಪಡೆದ ಧೈರ್ಯದ ಪ್ರತೀಕವಾಗಿದೆ ಮತ್ತು ಸಹೋದರಿಯ ಭಾವನೆಗಿಂತ ಬಲವಾದುದಾಗಿದೆ ಎಂದಿದ್ದಾರೆ.
Discussion about this post