ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ #KuvempuUniversity ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಭದ್ರಾವತಿಯ #Bhadravathi ಲೋಕೇಶ್ ಅವರನ್ನು ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.
Also Read: ಶಿವಮೊಗ್ಗ ಮಾರಿ ಜಾತ್ರೆಗೆ ವಿದ್ಯುಕ್ತ ಚಾಲನೆ: ಸಾರ ಹಾಕಿ ಜಾತ್ರೆ ಆಮಂತ್ರಣ
ಪುರುಷರ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದ ಭದ್ರಾವತಿಯ ಸರ್ ಎಂ.ವಿ. ಕಲೆ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಲೋಕೇಶ್ ಪಟೇಲ್ ಅವರನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಸನ್ಮಾನಿಸಿದರು. ಕುಲಸಚಿವೆ ಜಿ. ಅನುರಾಧ, ಡಾ. ಎನ್.ಡಿ. ವಿರೂಪಾಕ್ಷ, ಡಾ. ಬಿ.ಇ. ಕುಮಾರಸ್ವಾಮಿ, ಕೋಚ್ ಶಫಿ ಮತ್ತಿತರು ಉಪಸ್ಥಿತರಿದ್ದರು.
Also Read: ಪ್ರಿಯತಮೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟ ಯುವಕ!? ಯುವತಿ ಧಾರುಣ ಸಾವು
ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಹೊಸಹಳ್ಳಿಯ ಮಂಜುನಾಥ್ ಮತ್ತು ಸರ್ವಮಂಗಳ ದಂಪತಿ ಪುತ್ರ ಲೋಕೇಶ್ ಪಟೇಲ್ ಕಳೆದ ವರ್ಷ ಪಾಂಡಿಚೆರಿಯಲ್ಲಿ ನಡೆದ ಮಿ. ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 2021ನೆಯ ಸಾಲಿನ ಶ್ರೀ ಕುವೆಂಪು ಪ್ರಶಸ್ತಿ ಕೂಡ ಗಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post