ಕಲ್ಪ ಮೀಡಿಯಾ ಹೌಸ್ | ಲಕ್ನೋ |
ತಾನೇ ಸಾಕಿದ ಪ್ರೀತಿಯ ನಾಯಿಯೊಂದು ಮನೆಯ ಒಡತಿಯನ್ನೇ ಘೋರವಾಗಿ ಕಚ್ಚಿ ಕೊಂದಿರುವ ಘಟನೆ ನಡೆದಿದೆ.
ಇಲ್ಲಿನ ಕೈಸರ್ ಭಾಗ್ ನಿವಾಸಿ ಜಿಮ್ ಟ್ರೇನರ್ ಅಮಿತ್ ಎನ್ನುವವರ ತಾಯಿ 82 ವರ್ಷದ ಸುಶೀಲಾ ತ್ರಿಪಾಠಿ ಎನ್ನುವವರೇ ಮೃತ ದುರ್ದೈವಿ.
ಅಮಿತ್ ಅವರು ಬ್ರೌನಿ ಎಂಬ ಪಿಟ್ ಬುಲ್ ನಾಯಿಯನ್ನು ಮೂರು ವರ್ಷದ ಹಿಂದೆ ತಂದು ಸಾಕಿದ್ದರು. ಮಂಗಳವಾರ ಬೆಳಿಗ್ಗೆ ಅಮಿತ್ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಸುಶೀಲ ಅವರನ್ನು ನಾಯಿ ಕಚ್ಚಲು ಆರಂಭಿಸಿದೆ. ಇದರಿಂದ ಭಯಭೀತರಾಗಿ ಅವರು ಕೂಗಿಕೊಂಡಾಗ ಅಕ್ಕಪಕ್ಕದವರು ಓಡಿ ಬಂದರಾದರೂ ಮನೆ ಬೀಗ ಹಾಕಿದ್ದ ಆಗಿದ್ದ ಕಾರಣ ರಕ್ಷಿಸಲು ಸಾಧ್ಯವಾಗಲಿಲ್ಲ.
ಹೀಗಿದ್ದಾಗ, ಅಮಿತ್ ಅವರಿಗೆ ಕೂಡಲೆ ಕರೆ ಮಾಡಿ ಅಕ್ಕಪಕ್ಕದವರು ತಿಳಿಸಿದ್ದು, ಅವರು ಬಂದು ಬೀಗ ತೆರೆಯುವಷ್ಟರಲ್ಲಿ ಸುಶೀಲ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೇ ಕೊನೆಯುಸಿರೆಳೆದಿದ್ದಾರೆ.
ಮನೆಯವರೊಂದಿಗೆ ಹೊಂದಿಕೊಂಡಿದ್ದ ನಾಯಿಯ ಏಕಾಏಕಿ ಇಂತಹ ವ್ಯಘ್ರ ವರ್ತನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post