ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶ ವಿದೇಶಗಳಲ್ಲಿ ಪ್ರಖ್ಯಾತವಾಗಿರುವ ಒಡಿಶಾದ ಐತಿಹಾಸಿಕ ಪುರಿ ಜಗನ್ನಾಥ ಯಾತ್ರೆಗೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಅನುಮತಿ ನೀಡಿದೆ.
ಈ ಕುರಿತಂತೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ, ರಾಜ್ಯ ಸರ್ಕಾರ ಹಾಗೂ ದೇವಾಲಯ ಮಂಡಳಿ ರಥೋತ್ಸವ ಕುರಿತು ಮಾರ್ಗಸೂಚಿ ರಚಿಸಿ ಭಕ್ತರ ಆರೋಗ್ಯದ ಬಗ್ಗೆ ಗಮನ ಹರಿಸಲು ಸೂಚಿಸಿದೆ.
ಸಾಮಾಜಿಕ ಅಂತರ ನಿಬಂಧನೆಗಳಿಗೆ ಪ್ರಾಮುಖ್ಯತೆ ಕಲ್ಪಿಸಲು ಯಾತ್ರೆ ನಿರ್ವಹಣೆಯಲ್ಲಿ ಯಂತ್ರಗಳು , ಅನೆಗಳ ಬಳಕೆ ಬಗ್ಗೆ ಹೈಕೋರ್ಟ್ ಒಲವು ತೋರಿಸಿರುವುದು ದೇಗುಲದ ಸತ್ ಸಂಪ್ರದಾಯ ಹಾಗೂ ಕಾಯ್ದೆಗೆ ವಿರುದ್ದ ಎಂದು ಆರ್ಜಿದಾರರರ ವಾದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದ ನ್ಯಾಯಪೀಠ ಜೂನ್ 18 ರಂದು ಪುರಿ ಜಗನ್ನಾಥ್ ರಥ ಯಾತ್ರೆಗೆ ತಡೆಯಾಜ್ಞೆ ವಿಧಿಸಿ ಆದೇಶಿಸಿತ್ತು. ಇದೀಗ ಕೋರ್ಟ್ ಅನುಮತಿ ದೊರೆತ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭುವನೇಶ್ವರದಲ್ಲಿ ಇಂದು ರಥಯಾತ್ರೆ ಪೂರ್ವಸಿದ್ಧತಾ ಸಭೆ ನಡೆಸಲಿದ್ದಾರೆ.
Get In Touch With Us info@kalpa.news Whatsapp: 9481252093





Discussion about this post