ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಲಕ್ನೋ: ದೇಶವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಪರೀಕ್ಷೆ ಉತ್ತರ ಪ್ರದೇಶದ ಖಾಸಗಿ ಲ್ಯಾಬ್’ನಲ್ಲಿ ನಡೆಯಲಿದ್ದು, ಇದರ ವೆಚ್ಚವನ್ನು 2500 ರೂ.ಗಳಿಗೆ ನಿಗದಿಪಡಿಸಲಾಗಿದೆ.
ಉತ್ತರ ಪ್ರದೇಶದ ಖಾಸಗಿ ಲ್ಯಾಬ್’ನಲ್ಲಿ ಪರೀಕ್ಷೆ ನಡೆಯಲಿದ್ದು, 2500 ರೂ.ಗಳಿಗೆ ನಿಗದಿಪಡಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕೂ ಮೊದಲು 4 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿತ್ತು.
ಈ ಕುರಿತಂತೆ ಅಲ್ಲಿನ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಆದೇಶ ಹೊರಡಿಸಿದ್ದು, ಸೋಂಕು ಇದ್ದರೆ ಕೇವಲ ಒಂದೇ ಹಂತದ ಪರೀಕ್ಷೆಯಲ್ಲಿ ತಿಳಿದುಬರುತ್ತದೆ. ಪಾಸಿಟಿವ್ ಇಲ್ಲದ ಪ್ರಕರಣದಲ್ಲಿ ಪರೀಕ್ಷೆಗಾಗಿ ಕೇವಲ 2500 ರೂ. ಪಾವತಿಸಿದರೆ ಸಾಕು ಎಂದಿದ್ದಾರೆ.
Get in Touch With Us info@kalpa.news Whatsapp: 9481252093
















