ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ|
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ||
ದುರ್ಗಾದೇವಿಯ ಇನ್ನೊಂದು ಹೆಸರು ಮಹಾಗೌರಿ ಎಂದಾಗಿದೆ. ಎಂಟನೇ ದಿನವಾದ ಅಷ್ಟಮಿಯಂದು ಪೂಜೆಗೊಳ್ಳುವ ದೇವಿ ಮಹಾಗೌರಿಯಾಗಿರುತ್ತಾಳೆ. ಇವಳು ಸಂಪೂರ್ಣ ಗೌರ ವರ್ಣವದವಳಾಗಿರುವುದರಿಂದ ಮಹಾಗೌರಿ. ಇವಳ ವಾಹನ ಬಿಳಿ ಆನೆ ಅಥವಾ ನಂದಿಯಾಗಿರುತ್ತದೆ. ನಂದಿ ಅಥವಾ ಆನೆ ಎರಡೂ ಬಿಳಿಯದ್ದೇ ಆಗಿರುತ್ತದೆ. ಚತುರ್ಭುಜೆಯಾಗಿದ್ದು ತ್ರಿಶೂಲ ಮತ್ತು ಡಮರು ಹಿಡಿದಿರುವ ಇವಳಿಗೆ ನವಿಲು ಗರಿಯ ಹಸಿರು ಬಣ್ಣ ಪ್ರಿಯವಾದ ಬಣ್ಣ ವಾಗಿರುತ್ತದೆ. ಭಕ್ತರು ದೇವಿಗೆ ತೆಂಗಿನಕಾಯಿ ನಿವೇದಿಸುತ್ತಾರೆ. ದೇವಿಗೆ ಜಾಜಿ ಅಥವಾ ರಾತ್ರಿಯಲ್ಲಿ ಅರಳುವ ಮಲ್ಲಿಗೆ ಬಹಳ ಪ್ರಿಯವಾದ ಹೂವಾಗಿದೆ.
ಇನ್ನೊಂದು ಕತೆಯ ಪ್ರಕಾರ ಮಹಾಗೌರಿಯು ಶಿವನನ್ನು ವರಿಸುವ ಸಲುವಾಗಿ ಕಠೋರ ತಪಸ್ಸು ಆಚರಿಸಿ ಅವಳ ಕಾಠಿಣ್ಯದ ವ್ರತದಿಂದ ಕಪ್ಪಾಗಿದ್ದಳು ಅವಳನ್ನು ಗಂಗೆಯಿಂದ ತೊಳೆದನಂತರ ಬೆಳ್ಳಗೆ ಆದಳು ಎಂದು ಹೇಳುತ್ತಾರೆ.
ಮಹಾಗೌರಿಯ ಉಪಾಸನೆ ಬಹಳ ಶ್ರೇಷ್ಠ ಹಾಗೂ ಶೀಘ್ರ ಫಲದಾಯಕವಾಗಿದೆ. ದುಷ್ಟರ ಸಂಹಾರ ಮತ್ತು ಭಕ್ತರ ಉದ್ಧಾರಕ್ಕೇಂದೆ ಅವತಾರ ಮಡಿದ ದೇವಿಯು ಮುಂಬರುವ ಆಪತ್ತುಗಳನ್ನೂ ಪರಿಹರಿಸುವವಳಾಗಿದ್ದಾಳೆ.
ಮಹಾಗೌರಿಯನ್ನು ಪಠಿಸುವ ಮಂತ್ರ “ಓಂ ದೇವಿ ಮಹಾಗೌರೈ ನಮಃ” ಎಂದಾಗಿದ್ದು ಅವಳ ” ಯಾ ದೇವಿ ಸರ್ವ ಭೂತೇಷು ಮಾ ಮಹಾಗೌರಿ ರೂಪೇಣ ಸಂಸ್ಥಿತಾ, ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ “ಎಂದು ಸ್ತುತಿಸಬೇಕು.
ದುರ್ಗಾ ಪೂಜೆ
ಆಶ್ವಯುಜ ಅಷ್ಟಮಿಯಂದು ಮಾಡುವ ದುರ್ಗಾ ಪೂಜೆ ಬಹಳ ಶ್ರೇಷ್ಠವಾಗಿದೆ. ಮುಂಜಾನೆಯಿಂದ ಸಂಜೆಯವರೆಗೆ ಉಪವಾಸವಿದ್ದು ದೀಪಸ್ಥಂಬದಲ್ಲಿ ದೇವಿಯನ್ನು ಅವಾಹನೆ ಮಡಿ ದುರ್ಗಾ ದೀಪ ನಮಸ್ಕಾರ ಮತ್ತು ಸಪ್ತಶತಿ ಪಾರಾಯಣವನ್ನು ಮಾಡುವುದು ಬಹಳ ಶ್ರೇಷ್ಠವಾಗಿರುತ್ತದೆ. ವಿವಾಹವಾಗದ ಸ್ತೀ ಪುರುಷರು ವಿಶೇಷವಾಗಿ ಮಾಡುತ್ತಾರೆ. ಯಾವುದೇ ದಿನದಂದು ಬೇಕಾದರೂ ಮಾಡಬಹುದು ಆದರೆ ಅಷ್ಟಮಿ ದಿನ ಮಾಡುವುದು ಶ್ರೇಷ್ಠ. ಈ ದಿನ ಚಂಡಿಕಾ ಹೋಮವನ್ನು ಕೂಡ ವಿಶೇಷವಾಗಿ ಮಾಡುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post