ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಶುಭದಾಸ್ತು ಸದಾ ದೇವೀ ಸ್ಕಂದ ಮಾತಾ ಯಶಸ್ವಿನಿ ||
ದೇವಿಯ ಐದನೇ ದಿನ ರೂಪವನ್ನು ಸ್ಕಂದ ಮಾತಾ ಎನ್ನಲಾಗುತ್ತದೆ. ಕುಮಾರ, ಕಾರ್ತೀಕೇಯ, ಸ್ಕಂದ, ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಪ್ರಸಿದ್ಧನಾಗಿರುವ ಮಯೂರ ವಾಹನನ ಮಾತೆಯೇ ಈ ಸ್ಕಂದಮಾತಾ.
ದೇವಾಸುರ ಸಂಗ್ರಾಮದಲ್ಲಿ ದೇವತೆಗಳ ನಾಯಕನಾಗಿ ತಾರಕಾಸುರ ವಧೆಯನ್ನು ಮಾಡಿದ ಕುಮಾರ ಸ್ಕಂದನ ಮಾತೆಯ ಪೂಜೆಯಿಂದ ಭಕ್ರನ ಮನಸ್ಸು “ವಿಶುದ್ಧ” ಚಕ್ರದಲ್ಲಿ ನಿಲ್ಲತ್ತದೆ. ವಿಶುದ್ಧ ಚಕ್ರದಲ್ಲಿ ನಿಲ್ಲುವುದು ಎಂದರೆ ಹೊರಗಿನ ಆಗುಹೋಗುಗಳಿಂದ ದೂರ ಇದ್ದು ಮನಸ್ಸು ಸಂಪೂರ್ಣವಾಗಿ ಭಗವಂತನಲ್ಲಿ ನೆಲೆಸುವುದು ಆಗಿದೆ. ಭಕ್ತನ ಹಿಂದೆ ದೇವಿಯ ಪ್ರಭಾ ಮಂಡಲವು ಸದಾ ಹರಡಿಕೊಂಡಿದ್ದು ದೇವಿಯ ಮಗುವನ್ನು ಸಂರಕ್ಷಿಸುವಂತೆ ಭಕ್ತನನ್ನು ಸದಾ ಕಾಪಾಡುತ್ತಾಳೆ.
ಸಿಂಹವು ದೇವಿಯ ವಾಹನವಾಗಿದೆ. ಅವಳಿಗೆ ಹಸಿರು ಬಣ್ಣ ಪ್ರಿಯವಾದ ಬಣ್ಣವಾದರೆ ಬಾಳೆಹಣ್ಣು ಪ್ರೀತಿಯ ಫಲವಾಗಿದೆ. ಇವಳನ್ನು ಕೆಂಪು ಬಣ್ಣದ ಪುಷ್ಪಗಳಿಂದ ಪೂಜಿಸಿದರೆ ಅವಳಿಗೆ ಬಹಳ ಪ್ರೀತಿ ಇವಳು ಹಳದಿ ಬಣ್ಣದ ವಸ್ತ್ರವನ್ನು ಧರಿಸಿರುತ್ತಾಳೆ.
ದೇವಿಯನ್ನು ಪೂಜಿಸುವ ಮಂತ್ರ “ಓಂ ದೇವಿ ಸ್ಕಂದಮಾತಾಯೈ ನಮಃ” ಹಾಗೂ ಅವಳನ್ನು ಸ್ತುತಿಸುವ ಸ್ತೋತ್ರ “ಯಾ ದೇಔಇ ಸರ್ವ ಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದಾಗಿದೆ.
ಐದನೇ ದಿನದಂದು ಸ್ಕಂದ ಮಾತ ಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

























Discussion about this post