ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇ ಕಾಮರ್ಸ್ #E-Commerce ವೇದಿಕೆಗಳಲ್ಲಿ 13 ಮಾದರಿ ಡಾರ್ಕ್ ಪ್ಯಾಟ್ರನ್‌ಗಳನ್ನು ಗುರುತಿಸಿದ್ದು, ವಂಚನೆ ನಿಯಂತ್ರಣಕ್ಕಾಗಿ ಮೂರು ವಿಧದ ಜಾಗ್ರತಿ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ #Minister Pralhad Joshi ತಿಳಿಸಿದರು.
ನವದೆಹಲಿಯಲ್ಲಿ ಮಂಗಳವಾರ ಸಂಜೆ ಮಾದ್ಯಮದವರೊಂದಿಗೆ ಮಾತನಾಡಿ, ಇ ಕಾಮರ್ಸ್ ವೇದಿಕೆ, ಡಿಜಿಟಲ್ ವಹಿವಾಟಿನಲ್ಲಿ ವಂಚನೆ ತಡೆಯಲು, ಡಾರ್ಕ್ ಪ್ಯಾಟ್ರನ್ #Dark Pattern ಪರಿಹಾರ ಕ್ರಮವಾಗಿ ಆಂತರಿಕ ಲೆಕ್ಕಪರಿಶೋಧನೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಎಲ್ಲಾ ಕಂಪನಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಆಂತರಿಕ ಆಡಳಿತ, ಗ್ರಾಹಕ ರಕ್ಷಣಾ ಕಾರ್ಯವಿಧಾನಗಳಲ್ಲಿ ಸಂಯೋಜಿಸಬೇಕು ಎಂದು ಸೂಚನೆ ನೀಡಿದರು.
ಮೂರು ಅಪ್ಲಿಕೇಷನ್‌ಗಳು: ಡಾರ್ಕ್ ಪ್ಯಾಟರ್ನ್ ಕುರಿತಂತೆ ಗ್ರಾಹಕರ ರಕ್ಷಣೆಗಾಗಿ IIT BHU ಸಹಯೋಗದೊಂದಿಗೆ ಈಗಾಗಲೇ ಮೂರು ಪ್ರಬಲ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗಿದೆ. ʼಜಾಗೃತಿ ಅಪ್ಲಿಕೇಶನ್ʼ, ʼಜಾಗೋ ಗ್ರಹಕ್ ಜಾಗೋʼ ಮತ್ತು ʼಜಾಗೃತಿ ಡ್ಯಾಶ್‌ಬೋರ್ಡ್ʼ ಅನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಅಪ್ಲಿಕೇಷನ್‌ಗಳನ್ನು ಪರಿಶೀಲಿಸುವ ಮೂಲಕ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಡಾರ್ಕ್ ಪ್ಯಾಟರ್ನ್‌ಗಳ ಕುರಿತು ವಿವರವಾದ ವರದಿ ಸಿದ್ಧಪಡಿಸಿ ನೀಡುತ್ತದೆ. ಇದರಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚುತ್ತದೆ. ನಮ್ಮ ಈ ಕ್ರಮ ಆನ್‌ಲೈನ್‌ನಲ್ಲಿ ದಾರಿ ತಪ್ಪಿಸುವ, ಮೋಸಗೊಳಿಸುವ ವಿನ್ಯಾಸ ಪದ್ಧತಿಗಳನ್ನು ಎದುರಿಸುವ ದೃಢ ಸಂಕಲ್ಪವಾಗಿದೆ ಎಂದು ಸಚಿವರು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಗ್ರಾಹಕರು ಜಾಗರೂಕರಾಗಿದ್ದಾರೆ ಮತ್ತು ಮಾಹಿತಿ ಉಳ್ಳವರಾಗಿದ್ದಾರೆ. ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಅವರು ಯಾವುದೇ ರೀತಿಯ ಮೋಸ-ವಂಚನೆಯನ್ನು ಸಹಿಸುವುದಿಲ್ಲ. ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಸಹ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಹೇಳಿದರು.
NCHನಲ್ಲಿ ದೂರು ಹೆಚ್ಚಳ: ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ (NCH) ಡಾರ್ಕ್ ಪ್ಯಾಟರ್ನ್ ಕುರಿತಂತೆ ವ್ಯಾಪಕ ದೂರುಗಳು ದಾಖಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, ಇದರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಹಕ ರಕ್ಷಣಾ ಪ್ರಾಧಿಕಾರ ಹಿಂಜರಿಯುವುದಿಲ್ಲ. ಪ್ರತಿ ಸಂಸ್ತೆಗಳೂ ಮಾರ್ಗಸೂಚಿ ಪಾಲಿಸಬೇಕು ಎಂದು ಇ ಕಾಮರ್ಸ್ ಪ್ರಮುಖರಿಗೆ ನಿರ್ದೇಶನ ನೀಡಿದರು.
ಇ ಕಾಮರ್ಸ್ ವೇದಿಕೆಗಳಲ್ಲಿ ಡಾರ್ಕ್ ಪ್ಯಾಟರ್ನ್‌ಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ನಿಯಮಿತ ಆಂತರಿಕ ಲೆಕ್ಕಪರಿಶೋಧನೆ ನಡೆಸಲೇಬೇಕು. ಕಂಪನಿಗಳು CCPA ಮಧ್ಯಪ್ರವೇಶಿಸುವವರೆಗೆ ಕಾಯಬಾರದು. ನೋಟಿಸ್ ನೀಡಿ ವಂಚನೆ ಮಾದರಿಗಳನ್ನು ತೆಗೆದುಹಾಕಬೇಕು ಎಂದು ಸೂಚನೆ ನೀಡಿದರು.

ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ ಅವರು, ಡಾರ್ಕ್ ಪ್ಯಾಟರ್ನ್ಸ್ ಮೋಸಗೊಳಿಸುವ ವಿನ್ಯಾಸವಾಗಿದ್ದು, ಇದನ್ನು ಎದುರಿಸಲು ಮೀಸಲಾದ ಮಾರ್ಗಸೂಚಿ ಹೊರಡಿಸಿದ ಮೊದಲ ದೇಶ ಭಾರತವಾಗಿದೆ ಎಂದು ಹೇಳಿದರು.
ಪ್ರಮುಖ ಇ-ಕಾಮರ್ಸ್ ಕಂಪನಿಗಳಾದ 1mg.com, AIRBNB, Amazon, Apple, Zepto, Booking.com, Ola Electric, Tata Digital, Adidas India, Samsung, Ikigai Law, Indigo Airlines, Ixigo, MakeMyTrip, Mastercard, Meta, Netmeds, Namma Yatri, PharmEasy, Reliance Retail, Rapido, Shiprocket, Snapdeal, Swiggy, Thomas Cook, Uber, Whatsapp, Yatra, Zomato & Blinkit, Flipkart, Google, Justdial, ONDC, ಮತ್ತು Paytm ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ, ಪ್ರಮುಖ ಕೈಗಾರಿಕಾ ಸಂಘಗಳಾದ CAIT, CCI, FICCI, NASSCOM, PHDCCI, ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘವು ಸ್ವಯಂಸೇವಾ ಗ್ರಾಹಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post