ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಕಲಿ ಆಧಾರ್ ಕಾರ್ಡ್ #Adhar Card ಬಳಸಿ ಸಂಸತ್ ಭವನಕ್ಕೆ #Parliament of India ಪ್ರವೇಶಿಸುವ ಯತ್ನ ನಡೆಸಿದ ಮೂವರನ್ನು ಭದ್ರತಾ ಪಡೆಗಳು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.
ಬಂಧಿತರನ್ನು ಖಾಸಿಂ, ಮೋನಿಶ್ ಮತ್ತು ಸೋಯೆಬ್ ಎಂದು ಗುರುತಿಸಲಾಗಿದೆ.
ಮೂವರೂ ಕಳೆದ ಮೂರು ತಿಂಗಳಿನಿಂದಲೂ ಸಂಸತ್ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಗುರುವಾರ ಅನುಮಾನಗೊಂಡು ಸಿಐಎಸ್’ಎಫ್ ಭದ್ರತಾ ಸಿಬ್ಬಂದಿ ಕೂಲಂಕಶವಾಗಿ ಪರಿಶೀಲನೆ ನಡೆಸಿದಾಗ ನಕಲಿ ಆಧಾರ್ ಕಾರ್ಡ್ ಬಳಸಿರುವುದಾಗಿ ಪತ್ತೆಯಾಗಿದೆ.
ನಕಲಿ ಆಧಾರ್ ಕಾರ್ಡ್ ಬಳಸಿರುವುದು ಪತ್ತೆಯಾದ ತತಕ್ಷಣವೇ ಒಂದು ಕ್ಷಣವೂ ತಡ ಮಾಡದೇ ಮೂವರನ್ನೂ ಸಹ ವಶಕ್ಕೆ ಪಡೆಯಲಾಗಿದೆ.
ಮೂವರು ಆರೋಪಿಗಳ ವಿರುದ್ಧ ಫೋರ್ಜರಿ ಮತ್ತು ವಂಚನೆ ಪ್ರಕರಣ ದಾಖಲಿಸಿ ತನಿಖೆಗೊಳಪಡಿಸಲಾಗಿದೆ. ಇದರ ಬೆನ್ನಲ್ಲೇ ಸಿಐಎಸ್’ಎಫ್ ಸಿಬ್ಬಂದಿ ಹಾಗೂ ದೆಹಲಿ ಪೊಲೀಸರು ಸಂಸತ್ ಭವನದ ಸಂಪೂರ್ಣ ಭದ್ರತೆಯನ್ನು ಮರುಪರಿಶೀಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post