ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೆಹಲಿ ನಾರ್ತ್ ಬ್ಲಾಕ್’ನಲ್ಲಿರುವ ಕೇಂದ್ರ ಗೃಹ ಕಚೇರಿಗೆ ಬಾಂಬ್ ದಾಳಿ ಬೆದರಿಕೆ #Bomb attack threat ಬಂದಿದ್ದು, ಈ ಪ್ರದೇಶದ ಇಂಚಿಂಚೂ ಸ್ಥಳವನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಇಮೇಲ್ ಮೂಲಕ ಬಾಂಬ್ ಸ್ಪೋಟ ಬೆದರಿಕೆ ಕರೆ ಬಂದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಅಗ್ನಿ ಶಾಮಕ ದಳ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ದೌಡಾಯಿಸಿದ್ದಾರೆ.
ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಪೊಲೀಸ್ ಕಂಟ್ರೋಲ್ ರೂಮ್‌ನಿಂದ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ.
Also read: ವಿರಾಟ್ ಕೊಹ್ಲಿಗೆ ಗಂಭೀರ ಭದ್ರತಾ ಬೆದರಿಕೆ | RCB ಅಭ್ಯಾಸ ಪಂದ್ಯ ರದ್ದು
ರಾಷ್ಟ್ರ ರಾಜಧಾನಿಯ ಶಾಲೆಗಳು, ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು ಮತ್ತು ಜೈಲುಗಳಿಗೆ ಕಳುಹಿಸಲಾದ ನಕಲಿ ಬಾಂಬ್ ಇಮೇಲ್‌ಗಳ ಪೈಕಿ ಈ ಘಟನೆಯು ಇತ್ತೀಚಿನದು. ದೆಹಲಿ ಅಲ್ಲದೆ, ಜೈಪುರ, ಲಕ್ನೋ ಮತ್ತು ಅಹಮದಾಬಾದ್‌ನ ಶಾಲೆಗಳಿಗೂ ಇದೇ ರೀತಿಯ ಬೆದರಿಕೆಗಳು ಬಂದಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post