ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನರೇಂದ್ರ ಮೋದಿಯವರು #Narendra Modi ದೇಶದ ಪ್ರಧಾನಮಂತ್ರಿಯಾಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ನಿಗದಿಯಾಗಿದೆ ಎಂದು ವರದಿಯಾಗಿದೆ.
ಒಂದು ಮಾಹಿತಿಯಂತೆ ಜೂನ್ 8ರಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದ್ದರೂ, ಅಧಿಕೃತವಾಗಿ ಘೋಷಣೆಯಾಗಿಲ್ಲ.

Also read: ಗೀತಕ್ಕಗೆ ಸೋಲು | ತಿಂಗಳುಗಳ ಕಾಲ ಪ್ರಚಾರ ನಡೆಸಿದ್ದ ಶಿವರಾಜಕುಮಾರ್ ಹೇಳಿದ್ದೇನು
ಈ ನಡುವೆಯೇ ಸರ್ಕಾರ ರಚಿಸಲು ಎನ್’ಡಿಎಗೆ ಜೆಡಿಯು #NDA, JDU ಹಾಗೂ ಟಿಡಿಪಿ ಬೆಂಬಲ ಅನಿವಾರ್ಯವಾಗಿದೆ. ಚಂದ್ರಬಾಬು ನಾಯ್ಡು ಈಗಾಗಲೇ ತಾವು ಎನ್’ಡಿಎ ಜೊತೆಯಲ್ಲಿರುವುದಾಗಿ ಘೋಷಣೆ ಮಾಡಿದ್ದಾರೆ.

ಇಂದು ಸಂಜೆ 4 ಗಂಟೆಗೆ ಎನ್’ಡಿಎ ನಾಯಕರ ಸಭೆ ನವದೆಹಲಿಯಲ್ಲಿ ನಡೆಯಲಿದ್ದು, ಜೆಡಿಎಸ್’ನ ಎಚ್.ಡಿ. ಕುಮಾರಸ್ವಾಮಿ, ಟಿಡಿಪಿಯ ಚಂದ್ರಬಾಬು ನಾಯ್ಡು ಸೇರಿ ಮೈತ್ರಿಯ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ. ನಿತೀಶ್ ಕುಮಾರ್ ಸಹ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಯಾವುದೇ ಸ್ಪಷ್ಟ ಚಿತ್ರಣ ದೊರೆಯಲು ಸಂಜೆ ಎನ್’ಡಿಎ ನಾಯಕರ ಸಭೆ ಮುಕ್ತಾಯವಾಗುವವರೆಗೂ ಕಾಯಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post