ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಾಮಾನ್ಯ ಜ್ವರಕ್ಕೆ #Fever ಜನರು ತೆಗೆದುಕೊಳ್ಳುವ ಪ್ಯಾರಾಸಿಟಮಾಲ್ #Paracetemol ಸೇರಿದಂತೆ ಸುಮಾರು 53 ಔಷಧಿಗಳ ಗುಣಮಟ್ಟದ ಕುರಿತಾಗಿ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಹೌದು… ಈ ಕುರಿತಂತೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ ಮಾಸಿಕ ಔಷಧ ಎಚ್ಚರಿಕೆ ಪಟ್ಟಿಯಲ್ಲಿ ಈ ಮಾಹಿತಿ ಪ್ರಕಟಿಸಿದೆ.
ಪ್ರಮುಖವಾಗಿ ಪ್ಯಾರಾಸಿಟಮಾಲ್ ಸೇರಿದಂತೆ 53 ಔಷಧಗಳನ್ನು ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ ಎಂದು ಘೋಷಿಸಿದೆ.
Also read: ಶಿರೂರು ಭೂಕುಸಿತ | ಡ್ರೈವರ್ ತನ್ನ ಮಗನಿಗಾಗಿ ಕೊಂಡಿದ್ದ ಆಟಿಕೆ ಲಾರಿ ಪತ್ತೆ | ಮನಕಲಕುವ ಸುದ್ದಿ
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಪೂರಕಗಳು, ಮಧುಮೇಹದ ಮಾತ್ರೆಗಳು ಮತ್ತು ಅಧಿಕ ರಕ್ತದೊತ್ತಡದ ಔಷಧಿಗಳು ಸೇರಿದಂತೆ 50ಕ್ಕೂ ಹೆಚ್ಚು ಔಷಧಗಳು ಭಾರತದ ಔಷಧ ನಿಯಂತ್ರಕದಿAದ ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿವೆ.
ವಿಟಮಿನ್ ಸಿ ಮತ್ತು ಡಿ 3 ಮಾತ್ರೆಗಳು ಶೆಲ್ಕಾಲ್, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಸಾಫ್ಟ್ ಜೆಲ್’ಗಳು, ಆಂಟಿಆಸಿಡ್ ಪ್ಯಾನ್-ಡಿ, ಪ್ಯಾರೆಸಿಟಮಾಲ್ ಮಾತ್ರೆಗಳು ಐಪಿ 500 ಮಿಗ್ರಾಂ, ಮಧುಮೇಹ ವಿರೋಧಿ ಔಷಧ ಗ್ಲಿಮೆಪಿರೈಡ್, ಅಧಿಕ ರಕ್ತದೊತ್ತಡ ಔಷಧ ಟೆಲ್ಮಿಸಾರ್ಟನ್ ಮುಂತಾದ ಅಧಿಕ ಮಾರಾಟವಾಗುವ 53 ಔಷಧಿಗಳು ಈ ಪಟ್ಟಿಯಲ್ಲಿ ಸೇರಿವೆ.
ಈ ಔಷಧಿಗಳನ್ನು ಹೆಟೆರೊ ಡ್ರಗ್ಸ್, ಅಲ್ಕೆಮ್ ಲ್ಯಾಬೊರೇಟರೀಸ್, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್, ಕರ್ನಾಟಕ ಆಂಟಿಬಯೋಟಿಕ್ಸ್ ಆ್ಯಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಸ್, ಮೆಗ್ ಲೈಫ್ ಸೈನ್ಸಸ್, ಪ್ಯೂರ್ ಆ್ಯಂಡ್ ಕ್ಯೂರ್ ಹೆಲ್ತ್ ಕೇರ್ ಮತ್ತು ಹೆಚ್ಚಿನವುಗಳಿಂದ ತಯಾರಿಸಲಾಗುತ್ತದೆ.
ಹೊಟ್ಟೆಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ವ್ಯಾಪಕವಾಗಿ ಬಳಸಲಾಗುವ ಔಷಧವಾದ ಮೆಟ್ರೋನಿಡಜೋಲ್ ಅನ್ನು ಪಿಎಸ್’ಯು ಹಿಂದೂಸ್ತಾನ್ ಆಂಟಿಬಯೋಟಿಕ್ ಲಿಮಿಟೆಡ್ ಉತ್ಪಾದಿಸುತ್ತದೆ. ಅದು ಗುಣಮಟ್ಟದ ಪರೀಕ್ಷೆಗಳಲ್ಲಿ ವಿಫಲವಾಗಿದೆ.
ಇನ್ನು, ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ವಿತರಿಸಿದ ಮತ್ತು ಉತ್ತರಾಖಂಡ ಮೂಲದ ಪ್ಯೂರ್ ಆ್ಯಂಡ್ ಕ್ಯೂರ್ ಹೆಲ್ತ್ ಕೇರ್ ತಯಾರಿಸಿದ ಶೆಲ್ಕಾಲ್ ಕೂಡ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ ಎಂದು ವರದಿಯಾಗಿದೆ.
ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್’ನ ಪ್ಯಾರಾಸಿಟಮಾಲ್ ಮಾತ್ರೆಗಳು ಕೂಡ ಗುಣಮಟ್ಟದಲ್ಲಿ ಪಾಸ್ ಆಗಿಲ್ಲ ಎಂದು ಉಲ್ಲೇಖಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post