ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಬಜೆಟ್ ಮಂಡನೆಗೆ #Union Budget ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ #Nirmala Seetharaman ಅವರಿಗೆ ಸ್ಪೀಕರ್ ಓಂ ಬಿರ್ಲಾ ಅವರು ಅನುಮತಿ ನೀಡಿದಾಕ್ಷಣ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಬಜೆಟ್ ಮಂಡನೆ ವೇಳೆ ಈ ರೀತಿ ಗದ್ದಲ, ಘೋಷಣೆ ಕೂಗುವುದು ಸರಿಯಲ್ಲ. ಸಂವಿಧಾನಾತ್ಮಕವಾಗಿರುವ ಈ ಪ್ರತಿಕ್ರಿಯೆಗೆ ಸಂಸತ್’ನಲ್ಲಿರುವ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಸ್ಪೀಕರ್ ಎಚ್ಚರಿಕೆ ನೀಡಿದರೂ ಸಹ ಪ್ರತಿಪಕ್ಷಗಳು ತಲೆಕೆಡಿಸಿಕೊಳ್ಳದೇ ಗದ್ದಲು ಮುಂದುವರೆಸಿದರು.

ಆದರೆ, ಪ್ರತಿಪಕ್ಷಗಳ ಗದ್ದಲ ಮುಂದುವರೆದಿದ್ದರೂ ಸಹ ತಲೆ ಕೆಡಿಸಿಕೊಳ್ಳದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಮಂಡನೆ ಆರಂಭಿಸಿದರು. ಇದರಿಂದಾಗಿ ಇನ್ನಷ್ಟು ಆಕ್ರೋಶಗೊಂಡ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿರುವ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post