ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪಂಚರಾಜ್ಯ ಚುನಾವಣೆಯಲ್ಲಿ Five State Election ಉತ್ತರಪ್ರದೇಶ, Uttara Pradesh ಗೋವಾ Goa ಹಾಗೂ ಮಣಿಪುರದಿಂದ Manipura ಸ್ಪರ್ಧಿಸಿದ್ದ ಶಿವಸೇನೆ ಮೂರೂ ಕಡೆಗಳಲ್ಲೂ ಅತ್ಯಂತ ಹೀನಾಯವಾಗಿ ಸೋತಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಮುಖಭಂಗ ಅನುಭವಿಸಿದೆ.
ಅತ್ಯಂತ ಮಹತ್ವದ ವಿಚಾರವೆಂದರೆ ಮೂರೂ ರಾಜ್ಯಗಳಲ್ಲೂ ಚುನಾವಣೆಯಾಗಿರುವ ನೋಟಾಗಿಂತಲೂ ಕಡಿಮೆ ಮತಗಳನ್ನು ಶಿವಸೇನೆ ಗಳಿಸಿರುವುದು ನಗೆಪಾಟಲಿಗೀಡಾಗಿದೆ.
ಗೋವಾದಲ್ಲಿ ಶಿವಸೇನೆಯಿಂದ ಸ್ಪರ್ಧಿಸಿದ್ದ ಹತ್ತು ಅಭ್ಯರ್ಥಿಗಳಲ್ಲಿ ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ. 1.12 ಪ್ರತಿಶತ ನೋಟಾ ಚಲಾವಣೆಯಾಗಿದ್ದರೆ, ಶಿವಸೇನೆ ಕೇವಲ 0.18ರಷ್ಟು ಮತಗಳನ್ನು ಪಡೆದಿದೆ.
ಉತ್ತರಪ್ರದೇಶದಲ್ಲಿ ಶೇ.0.69ರಷ್ಟು ನೋಟಾ ಚಲಾವಣೆಯಾಗಿದ್ದು, ಶಿವಸೇನೆಯ Shivasene ಮತಸಂಪಾದನೆ ಕೇವಲ 0.03 ಮಾತ್ರ. ಮಣಿಪುರದಲ್ಲಿ 6 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಇಲ್ಲೂ ಸಹ ನೋಟಾ ಶೇ. 0.54 ಚಲಾವಣೆಯಾಗಿದ್ದು, ಶಿವಸೇನೆಯ ಸಾಧನೆ ಕೇವಲ 0.34 ಮಾತ್ರ.
ಅಧಿಕಾರದ ಆಸೆಯಿಂದ ಭಾರೀ ವಿರೋಧ ಕಟ್ಟಿಕೊಂಡು ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚಿಸಿ ಅಧಿಕಾರಕ್ಕೇರಿದ ಉದ್ಧವ್ ಠಾಕ್ರೆಗೆ Uddhav Takre ಈ ಫಲಿತಾಂಶ ಭಾರೀ ಆಘಾತ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post