ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಂದೇ ಭಾರತ್ ರೈಲು #Vande Bharath Train ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರೈಲು ಹೊರಡುವ 15 ನಿಮಿಷ ಮೊದಲು ಟಿಕೆಟ್ ಬುಕಿಂಗ್ ಮಾಡಲು ಅವಕಾಶ ನೀಡಿದೆ.
ಇಲ್ಲಿಯವರೆಗೆ, ರೈಲು ಮೊದಲ ನಿಲ್ದಾಣದಿಂದ ಹೊರಟ ನಂತರ, ಮಾರ್ಗಮಧ್ಯದಲ್ಲಿರುವ ಯಾವುದೇ ನಿಲ್ದಾಣದಲ್ಲಿ ಟಿಕೆಟ್ ಬುಕಿಂಗ್ #Ticket Booking ಮಾಡಲು ಸಾಧ್ಯವಿಲ್ಲ ಎಂಬ ನಿಯಮವಿತ್ತು. ಇದರಿಂದಾಗಿ ರೈಲಿನಲ್ಲಿ ಹಲವು ಸೀಟುಗಳು ಖಾಲಿ ಉಳಿಯುತ್ತಿದ್ದವು. ಈ ಹೊಸ ವ್ಯವಸ್ಥೆಯಲ್ಲಿ, ರೈಲು ಯಾವುದೇ ಮಧ್ಯಂತರ ನಿಲ್ದಾಣಕ್ಕೆ ತಲುಪುವ 15 ನಿಮಿಷಗಳ ಮೊದಲು ಪ್ರಯಾಣಿಕರು ಆನ್‌ಲೈನ್ ಅಥವಾ ನಿಲ್ದಾಣದ ಟಿಕೆಟ್ ಕೌಂಟರ್‌ನಿಂದ ಟಿಕೆಟ್ ಬುಕ್ ಮಾಡಬಹುದು. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post