ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕಣಿವೆ ರಾಜ್ಯ ಕಾಶ್ಮೀರದ ನೌಶೇರಾ ಹಾಗೂ ರಾಜೌರಿ ವಲಯದಲ್ಲಿ ಇತ್ತೀಚೆಗೆ ಪಾಕಿಸ್ಥಾನದ ಡ್ರೋಣ್’ಗಳು #Pakistan drone ಪತ್ತೆಯಾಗಿದ್ದು, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ #Indian Army Chief General Upendra Dwivedi ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಡಿಜಿಎಂಓಗಳ ಮಟ್ಟದಲ್ಲಿನ ಸಭೆಯಲ್ಲಿ ಭಾರತ ಆಕ್ಷೇಪ ವ್ಯಕ್ತಪಸಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ಥಾನದಿಂದ ಬರುತ್ತಿರುವ ಡ್ರೋನ್ ಚಟುವಟಿಕೆಗಳ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಲಾಗಿದ್ದು, ಇತ್ತೀಚಿಗೆ ಜಮ್ಮು-ಕಾಶ್ಮೀರದ ನೌಶೇರಾ-ರಾಜೌರಿ ಸೆಕ್ಟರ್’ನಲ್ಲಿ ಪಾಕಿಸ್ತಾನದ ಡ್ರೋನ್’ಗಳು ಕಂಡುಬಂದಿದ್ದಕ್ಕೆ ಸಂಬಂಧಿಸಿದಂತೆ ಡಿಜಿಎಂಓಗಳ ಸಭೆಯಲ್ಲಿ ಆಕ್ಷೇಪಗಳನ್ನು ತಿಳಿಸಲಾಯಿತು ಎಂದಿದ್ದಾರೆ.
ಈ ಪ್ರದೇಶದಲ್ಲಿ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಒಂದೇ ಅಂಕೆಗೆ ಇಳಿದಿದೆ. ನೇಮಕಾತಿ ಬಹುತೇಕ ಕಣ್ಮರೆಯಾಗಿದೆ. 2025ರಲ್ಲಿ ಕೇವಲ ಎರಡು ಪ್ರಕರಣಗಳು ವರದಿಯಾಗಿವೆ. ಎಂಟು ಭಯೋತ್ಪಾದಕ ಶಿಬಿರಗಳು ಇನ್ನೂ ಸಕ್ರಿಯವಾಗಿವೆ. ಆರು ಎಲ್‌ಒಸಿಯತ್ತ ಮುಖ ಮಾಡಿವೆ. ಎರಡು ಅಂತಾರಾಷ್ಟ್ರೀಯ ಗಡಿಯಲ್ಲಿವೆ. ಪಾಕಿಸ್ತಾನಿ ಪಡೆಗಳು ಏನಾದರೂ ಪ್ರಯತ್ನಿಸಿದರೆ, ಅದರ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಸೇನೆಯು ಕ್ಷಿಪಣಿ ಮತ್ತು ರಾಕೆಟ್ ಪಡೆಯನ್ನು ಸಿದ್ಧಪಡಿಸುತ್ತಿದೆ. ನಮ್ಮ ಭದ್ರತಾ ಪಡೆಗಳು ಮೇ 10 ರಿಂದ 31 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿರುವುದರಿಂದ ಪಶ್ಚಿಮ ಫ್ರಂಟ್ ಮತ್ತು ಜಮ್ಮು ಮತ್ತು ಕಾಶ್ಮೀರ ಸೂಕ್ಷö್ಮವಾಗಿದ್ದರೂ ಸಂಪೂರ್ಣವಾಗಿ ನಿಯಂತ್ರಿಸಲ್ಪಟ್ಟಿವೆ ಎಂದಿದ್ದಾರೆ.
2025ರಲ್ಲಿ ಭದ್ರತಾ ಪಡೆಗಳು 31 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ. ಅವರಲ್ಲಿ ಶೇ. 65ರಷ್ಟು ಜನರು ಪಾಕಿಸ್ಥಾನದಿಂದ ಬಂದವರು. ಇದರಲ್ಲಿ ಆಪರೇಷನ್ ಮಹಾದೇವ್’ನಲ್ಲಿ ಪಹಲ್ಗಾಮ್ ದಾಳಿಯ ಮೂವರು ಅಪರಾಧಿಗಳನ್ನು ತಟಸ್ಥಗೊಳಿಸಲಾಗಿದೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















