ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಯಾಗರಾಜ್ ಪ್ರದೇಶದಲ್ಲಿ #Prayagraj Area ಆರಂಭಗೊಂಡಿರುವ ಮಹಾಕುಂಭ ಮೇಳ 2025ರಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳ #Pilgrims ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಐತಿಹಾಸಿಕ ಎನ್ನಬಹುದಾದ ಹಲವು ಕ್ರಮಗಳನ್ನು ಕೈಗೊಂಡಿದೆ.
ಈ ಕುರಿತಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ #Railway Minister Ashwin Vaishnav ಅವರು ಮಾಹಿತಿ ನೀಡಿದ್ದು, ಕುಂಭಮೇಳಕ್ಕಾಗಿ ಮಾಡಲಾಗಿರುವ ವ್ಯವಸ್ಥೆಗಳನ್ನು ಉದ್ಘಾಟಿಸಿದರು.
ಈ ಕ್ರಮಗಳು ಲಕ್ಷಾಂತರ ಯಾತ್ರಾರ್ಥಿಗಳಿಗೆ ಸುರಕ್ಷಿತ, ತಡೆರಹಿತ ಮತ್ತು ತಾಂತ್ರಿಕವಾಗಿ ಸುಧಾರಿತ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ ಎಂದರು.
ರೈಲ್ವೆ ಮಂಡಳಿ ಮಟ್ಟದಲ್ಲಿ ಮೀಸಲಾದ ರ್ವಾ ರೂಮ್ ಉದ್ಘಾಟಿಸಲಾಗಿದೆ.
ವಾರ್ ರೂಂ 24×7 ಕಾರ್ಯನಿರ್ವಹಿಸಲಿದ್ದು, ವಾಣಿಜ್ಯ, ಆರ್’ಪಿಎಫ್, ಮೆಕ್ಯಾನಿಕಲ್, ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ವಿಭಾಗಗಳ ಅಧಿಕಾರಿಗಳು ಮೇಲ್ವಿಚಾರಣೆ ಮತ್ತು ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಾರೆ.
9 ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ 1,176 ಸಿಸಿಟಿವಿ ಕ್ಯಾಮೆರಾಗಳು ನೈಜ-ಸಮಯದ ಮೇಲ್ವಿಚಾರಣೆಗಾಗಿ ಲೈವ್ ಫೀಡ್’ಗಳನ್ನು ಒದಗಿಸುತ್ತವೆ.
ಪ್ಲಾಟ್ ಫಾರಂ, ನಿಲ್ದಾಣ, ವಿಭಾಗೀಯ, ಜಿಲ್ಲೆ , ವಲಯ, ರೈಲ್ವೆ ಮಂಡಳಿಗಳ ನಡುವೆ ಸಮನ್ವಯ ಇರಲಿದೆ.
Also read: ಅಹಿಂದಾ ಅಹಿಂದಾ ಎನ್ನುವ ಸಿಎಂ ಅಹಿಂದಾ ವರ್ಗಕ್ಕೆ ಏನು ಮಾಡಿದ್ದಾರೆ? HD ಕುಮಾರಸ್ವಾಮಿ
ವಾರ್ ರೂಂ, ಜಿಲ್ಲೆ ಅಧಿಕಾರಿಗಳು ಮತ್ತು ರೈಲ್ವೆ ಅಧಿಕಾರಿಗಳ ನಡುವೆ ಪರಿಣಾಮಕಾರಿ ಸಮನ್ವಯವನ್ನು ಸುಗಮಗೊಳಿಸುತ್ತದೆ, ತಕ್ಷಣದ ನೆರವು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಖಾತ್ರಿಗೊಳಿಸುತ್ತದೆ.
ಪ್ರಮುಖವಾಗಿ, ಪ್ರಯಾಗರಾಜ್, ನೈನಿ, ಚಿಯೋಕಿ, ಮತ್ತು ಸುಬೇದರ್ಗಂಜ್ ನಿಲ್ದಾಣಗಳಲ್ಲಿ 12 ಭಾಷೆಗಳಲ್ಲಿ ಘೋಷಣೆ ವ್ಯವಸ್ಥೆ ಅಳವಡಿಸಲಾಗಿದೆ. 22 ಭಾಷೆಗಳಲ್ಲಿ ಯಾತ್ರಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ನೀಡುವ ಕಿರುಪುಸ್ತಕ ಬಿಡುಗಡೆ ಮಾಡಲಾಗಿದೆ.
48 ಪ್ಲಾಟ್ ಫಾರಂಗಳು ಮತ್ತು 21 ಫುಟ್ ಓವರ್ ಬ್ರಿಡ್ಜ್’ಗಳಿದ್ದು, 1 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಸಾಮರ್ಥ್ಯದ 23 ಶಾಶ್ವತ ಹಿಡುವಳಿ ಪ್ರದೇಶಗಳಿವೆ. 554 ಟಿಕೆಟ್ ಕೌಂಟರ್’ಗಳು, 151 ಮೊಬೈಲ್ ಯುಟಿಎಸ್ ಕೌಂಟರ್’ಗಳನ್ನು ಒಳಗೊಂಡಿವೆ.
ಬೃಹತ್ ವೆಚ್ಚದ ಯೋಜನೆ
ಕುಂಭಮೇಳದ ಯಶಸ್ಸಿಗಾಗಿ ಸುಮಾರು 3,700 ಕೋಟಿ ವೆಚ್ಚದ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಬನಾರಸ್-ಪ್ರಯಾಗರಾಜ್ ದ್ವಿಗುಣಗೊಳಿಸುವ ಯೋಜನೆ (ಗಂಗಾ ಸೇತುವೆ ಸೇರಿದಂತೆ), ಫಾಫಮೌ-ಜಂಘೈ ದ್ವಿಗುಣಗೊಳಿಸುವ ಯೋಜನೆಗಳು ಜಾರಿಯಲ್ಲಿವೆ.
ಎಷ್ಟು ಯಾತ್ರಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ?
ಮಹಾಕುಂಭ ಮೇಳ 2025ರಲ್ಲಿ ಸುಮಾರು 40 ಕೋಟಿ ಯಾತ್ರಾರ್ಥಿಗಳು ಭೇಟಿ ನೀಡುವ ನಿರೀಕ್ಷೆಯಿದೆ. ಮೌನಿ ಅಮವಾಸ್ಯೆಯಂದು 5 ಕೋಟಿ ಯಾತ್ರಾರ್ಥಿಗಳನ್ನು ನಿರೀಕ್ಷಿಸಲಾಗಿದೆ.
ಎಷ್ಟು ರೈಲುಗಳ ವ್ಯವಸ್ಥೆ ಆಗಿದೆ?
- ಕುಂಭ ಅವಧಿಯಲ್ಲಿ ಒಟ್ಟು 13,000 ರೈಲುಗಳನ್ನು ಚಲಾಯಿಸಲಾಗುವುದು:
- 10,000 ಸಾಮಾನ್ಯ ರೈಲುಗಳು.
- 3,134 ವಿಶೇಷ ರೈಲುಗಳು (ಹಿಂದಿನ ಕುಂಭಕ್ಕಿಿಂತ 4.5 ಪಟ್ಟು ಹೆಚ್ಚು)
- 1,869 ಕಡಿಮೆ ದೂರದ ರೈಲುಗಳು.
- 706 ದೂರದ ರೈಲುಗಳು.
- 559 ರಿಂಗ್ ರೈಲುಗಳು.
ಸುಗಮ ಪ್ರಯಾಣಿಕ ರೈಲು ಕಾರ್ಯಾಚರಣೆಗಳಿಗೆ ಸರಕು ರೈಲುಗಳನ್ನು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ಗಳಿಗೆ ಸ್ಥಳಾಂತರಿಸಲಾಗಿದೆ.
ಕುಂಭ ಯೋಜನೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 5,000 ಕೋಟಿ ಹೂಡಿಕೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post