ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಂಬಳಿ ಗೋಳ ಜಲಾಶಯ, ಭದ್ರಾ ಯೋಜನೆ , ಜಂಬದಹಳ್ಳ , ಗೊಂದಿ ಹಾಗೂ ತುಂಗಭದ್ರಾ ಅಣೆಕಟ್ಟು ಮತ್ತು ತುಂಗಾ ಮೇಲ್ದಂಡೆ ಯೋಜನೆ ಈ ಪ್ರದೇಶಗಳಲ್ಲಿ ಒಟ್ಟು 21, 350 ಹೆಕ್ಟೇರಿಗೆ, ಬಸಿಕಾಲುವೆ ಕಾಮಗಾರಿಕೆ ಅಗತ್ಯವಿರುವ ರೂ 158 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಲು ವಿನಂತಿ ಮಾಡಿಕೊಂಡರು.
ಬಸಿಕಾಲುವೆ ಕಾಮಗಾರಿಯಿಂದ ಭೂಮಿಯಲ್ಲಿ ನೀರಿನ ಹಾಗೂ ಉಪ್ಪಿನ ಅಂಶ ಕಡಿಮೆಯಾಗಿ ಹೆಚ್ಚು ಇಳುವರಿಯನ್ನು ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ವಿವರಿಸಿ, ಕೂಡಲೇ ಅನುದಾನವನ್ನು ಬಿಡುಗಡೆ ಮಾಡಲು ಸಚಿವರಲ್ಲಿ ಕೋರಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post