ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣೆಯಲ್ಲಿ #Lok Sabha Election ಅತಿ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದರೂ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಟಿಡಿಪಿ ಹಾಗೂ ಆರ್’ಜೆಡಿ #BJP, TDP, RJD ಅನಿವಾರ್ಯವಾದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಕಮಲ ಪಕ್ಷದ ನಾಯಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಆರಂಭಿಸಿದ್ದಾರೆ.
ಚಂದ್ರಬಾಬು ನಾಯ್ಡು #Chandrababu Naidu ತಾವು ಎನ್’ಡಿಎ ಜೊತೆಯಲ್ಲೇ ಇದ್ದೇವೆ ಎಂದು ಹೇಳಿದ್ದಾರೆ. ಅತ್ತ ನಿತೀಶ್ ಕುಮಾರ್ #Nitish Kumar ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ಖಚಿತಪಡಿಸಿಲ್ಲ ಮಾತ್ರವಲ್ಲ ಈ ಕುರಿತಂತೆ ಒಂದು ಅಕ್ಷರ ಸಹ ಮಾತನಾಡಿಲ್ಲ. ಈ ನಡುವೆ ಎನ್’ಡಿಎ ಸರ್ಕಾರ ರಚಿಸಲು ತಾವು ಅನಿವಾರ್ಯ ಎಂದು ತಿಳಿದಾಕ್ಷಣದಿಂದ ಎರಡೂ ಪಕ್ಷಗಳು ತೆರೆಮರೆಯಲ್ಲಿ ಆಟವಾಡಲು ಆರಂಭಿಸಿದ್ದು, ಹಲವು ಡಿಮ್ಯಾಂಡ್’ಗಳನ್ನು ಇರಿಸಲು ಆರಂಭಿಸಿದ್ದಾರೆ.

ಬಿಜೆಪಿಗೆ ಸರ್ಕಾರ ರಚಿಸಲು ಬೆಂಬಲ ನೀಡಲು ತಾವು ಅನಿವಾರ್ಯವಾದ ನಂತರ ನಿತೀಶ್ ಕುಮಾರ್ ಪರೋಕ್ಷವಾಗಿ ಡಿಮ್ಯಾಂಡ್ ಇರಿಸಿದ್ದಾರೆ.
ಜೆಡಿಯು ಪಕ್ಷದ ಅಲ್ಲಿನ ಶಾಸಕರೊಬ್ಬರು ಪ್ರಧಾನಿ ಹುದ್ದೆಗೇರಲು ನಿತೀಶ್ ಕುಮಾರ್ ಅವರಿಗಿಂತಲೂ ಉತ್ತಮ ನಾಯಕ ಇನ್ನು ಯಾರಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇದರೊಂದಿಗೆ ನಿತೀಶ್ ಕುಮಾರ್ ಪ್ರಧಾನಿಯಾಗುವ ಕನಸನ್ನು ತಮ್ಮ ಪಕ್ಷದ ಶಾಸಕರ ಮೂಲಕ ಹರಿಬಿಟ್ಟಿದ್ದಾರೆ.

ಇನ್ನು, ಇಂದು ಮುಂಜಾನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಚಂದ್ರಬಾಬು ನಾಯ್ಡು, ತಾವು ಎನ್’ಡಿಎ ಜೊತೆಯಲ್ಲೇ ಇz್ದÉÃವೆ ಎಂದಿದ್ದರೂ ಸಹ ಹಲವು ಷರತ್ತುಗಳನ್ನು ವಿಧಿಸಿದ್ದಾರೆ ಎಂದು ವರದಿಯಾಗಿದೆ.
Also read: 3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನಕ್ಕೆ ಡೇಟ್ ಫಿಕ್ಸ್?
ಮೂಲಗಳ ಪ್ರಕಾರ, ಲೋಕಸಭಾ ಸ್ಪೀಕರ್ ಸ್ಥಾನ, 5-6 ಸಚಿವ ಸ್ಥಾನ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ನಾಯ್ಡು ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ.

ದಶಕದ ಹಿಂದೆ ಎನ್’ಡಿಎ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಇದೇ ಆಂಧ್ರ ಪ್ರದೇಶದ ಟಿಡಿಪಿಯಿಂದ ಬಾಲಯ್ಯ ಸ್ಪೀಕರ್ ಆಗಿದ್ದರು. ಅಂದೂ ಸಹ ಇದೇ ರೀತಿ ಬೇಡಿಕೆ ಇರಿಸಿ ಹುದ್ದೆ ಪಡೆಯಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post