ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಲಾವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ #Malawi Vice President Saulas Chilima ಮತ್ತು ಬೇರೆ 9 ಮಂದಿಯಿದ್ದ ವಿಮಾನ ನಾಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ಕುರಿತಂತೆ ಅಲ್ಲಿನ ಅಧ್ಯಕ್ಷೀಯ ಕಚೇರಿ ಮತ್ತು ಕ್ಯಾಬಿನೆಟ್ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನವು ನಿಗದಿತ ಸಮಯಕ್ಕೆ ಇಳಿಯಲು ವಿಫಲವಾದ ನಂತರ ನಾಪತ್ತೆಯಾಗಿದೆ ಎಂದಿದೆ.

Also read: ಕೊಲೆ ಪ್ರಕರಣ | ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ 10 ಮಂದಿ ಅರೆಸ್ಟ್
ಅಧಿಕಾರಿಗಳ ಪ್ರಕಾರ, ವಿಮಾನವು ಲಿಲಾಂಗ್ವೆಯಿಂದ ಉತ್ತರಕ್ಕೆ ಸುಮಾರು 380 ಕಿಮೀ ದೂರ ಇರುವ ಮುಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.

ಅಂತೆಯೇ, ಮಲಾವಿ ರಕ್ಷಣಾ ಪಡೆಯ ಕಮಾಂಡರ್, ಜನರಲ್ ವ್ಯಾಲೆಂಟಿನೋ ಫಿರಿ, ಘಟನೆಯ ಬಗ್ಗೆ ಹಿಸ್ ಎಕ್ಸಲೆನ್ಸಿ ಡಾ. ಲಾಜರಸ್ ಮೆಕಾರ್ಥಿ ಚಕ್ವೆರಾ ಅವರಿಗೆ ತಿಳಿಸಿದ್ದಾರೆ. ಅಧ್ಯಕ್ಷರು ಬಹಾಮಾಸ್’ಗೆ ಅವರ ನಿಗದಿತ ನಿರ್ಗಮನವನ್ನು ರದ್ದುಗೊಳಿಸಿದ್ದಾರೆ. ಎಲ್ಲಾ ಪ್ರಾದೇಶಿಕ ಮತ್ತು ರಾಷ್ಟ್ರೀಯ ಏಜೆನ್ಸಿಗಳಿಗೆ ಆದೇಶ ನೀಡಿದ್ದಾರೆ. ವಿಮಾನದ ಸ್ಥಳವನ್ನು ಪತ್ತೆಹಚ್ಚಲು ತಕ್ಷಣದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ಎಂದು ಹೇಳಿಕೆ ಸೇರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post