ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಕೇಂದ್ರ ಭಾಗದಲ್ಲಿರುವ ಶತಮಾನ ಕಂಡ ಶ್ರೀ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ, ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡು, ಸಂಘಕ್ಕೆ ಹೊಸ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುನಾವಣೆ ಯಶಸ್ವಿಯಾಗಿ ನಡೆಯಿತು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಡಿ.ಎಸ್. ಪ್ರಸನ್ನಕುಮಾರ್ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸುಜಾತ ಜೋತಾಡಿ ಆಯ್ಕೆಯಾದರು.
Also Read>> ಶಿವಮೊಗ್ಗ | ವೈಯಕ್ತಿಕ ಕಾರಣಕ್ಕೆ ಅಣ್ಣನಿಂದಲೇ ತಮ್ಮನ ಹತ್ಯೆ
ನಾಯಕತ್ವದ ನಿರ್ಣಾಯಕ ಕ್ಷಣ
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕುತೂಹಲಕಾರಿಯಾಗಿತ್ತು. ಎಲ್ಲರ ಗಮನವು ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಸ್ಪರ್ಧೆಯತ್ತ ಹರಿದಿತ್ತು. ಕೈ ಎತ್ತುವ ಮೂಲಕ 13 ಸದಸ್ಯರು ಮತವನ್ನು ಚಲಾವಣೆ ಮಾಡಿದರು, ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ 8 ಮತಗಳನ್ನು ಪಡೆದು ಶಂಕರ್ ಡಿ.ಎಸ್. ಅವರನ್ನು 3 ಮತಗಳಿಂದ ಮಣಿಸಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧೆ
ಮಹಿಳಾ ಮೀಸಲು ಕ್ಷೇತ್ರದ ಸುಜಾತಾ ಜೋತಾಡಿ 7 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅವರ ಸ್ಪರ್ಧೆ ಸಿ. ರಾಜಶೇಖರ ವಿರುದ್ಧ ನಡೆದಿದ್ದು, ರಾಜಶೇಖರ 6 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಪುನರಾಯ್ಕೆ
132 ಮತಗಳ ಪಡೆದು ಸಿ. ರಾಜಶೇಖರ್ ನಾಲ್ಕನೇ ಬಾರಿಗೆ ಪುನರಾಯ್ಕೆಯಾದರೆ, ಅತಿ ಹೆಚ್ಚು 148 ಮತಗಳನ್ನು ಪಡೆದು ಡಿ.ಎಸ್. ಶಂಕರ್ ಶೇಟ್, 136 ಮತಗಳ ಪಡೆದು ಕೆ.ಪಿ. ಶ್ರೀಧರ ನೆಮ್ಮದಿ ಹಾಗೂ ಜೆ.ಎಸ್. ನಾಗರಾಜ ಜೈನ್ ಎರಡನೇ ಬಾರಿಗೆ ಪುನರಾಯ್ಕೆಯಾದರು. 226 ಷೇರುದಾರ ಮತದಾರರ ಪೈಕಿ 203 ಮಂದಿ ಹಕ್ಕು ಚಲಾಯಿಸಿದರು.
Also Read>> ಕೈತೋಟದಿಂದ ಎಷ್ಟೆಲ್ಲಾ ಪ್ರಯೋಜನವಿದೆ? ಕೃಷಿ ವಿವಿ ವಿದ್ಯಾರ್ಥಿಗಳು ಎಷ್ಟು ಚೆಂದ ವಿವರಿಸಿದ್ದಾರೆ ಓದಿ
ಹೊಸ ನಾಯಕತ್ವದ ನಿರೀಕ್ಷೆ
ಈ ಚುನಾವಣೆಯ ಮೂಲಕ ಸಂಘಕ್ಕೆ ಹೊಸ ಅಧ್ಯಕ್ಷರಾಗಿ ಡಿ.ಎಸ್. ಪ್ರಸನ್ನಕುಮಾರ್ ಮತ್ತು ಉಪಾಧ್ಯಕ್ಷರಾಗಿ ಸುಜಾತಾ ಜೋತಾಡಿ ನೇತೃತ್ವ ದೊರೆತಿದ್ದು, ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆ ಇದೆ.
ಷೇರುದಾರರು ಈ ಹೊಸ ನಾಯಕತ್ವದ ಮೇಲೆ ಭರವಸೆ ಇಟ್ಟು, ಸಂಘದ ಬೆಳವಣಿಗೆಯತ್ತ ತೀವ್ರ ಕುತೂಹಲದಿಂದ ನೋಡುತ್ತಿದ್ದಾರೆ.
ಚುನಾವಣೆ ಪ್ರಕ್ರಿಯೆ ಮತ್ತು ಸಹಕಾರ
ಚುನಾವಣಾ ಪ್ರಕ್ರಿಯೆ ನಿಷ್ಪಕ್ಷಪಾತವಾಗಿ ನಡೆಯಲು ಚುನಾವಣಾಧಿಕಾರಿ ಎನ್. ಷಣ್ಮುಖಾಚಾರ್ ಮತ್ತು ಅವರ ತಂಡದ ಸಹಾಯಕರು, ಮಹತ್ವದ ಪಾತ್ರ ವಹಿಸಿದರು. ಸಂಘದ ಕಾರ್ಯದರ್ಶಿ ಆರ್. ರವಿಕುಮಾರ್, ಆಂತರಿಕ ಸಹಾಯಕ ಕೆ. ರಾಜಶೇಖರಪ್ಪ, ಮತ್ತು ಸಿಬ್ಬಂದಿ ಸಹಕಾರದಿಂದ ಪ್ರಕ್ರಿಯೆ ಸುಗಮವಾಗಿ ಮುಗಿಯಿತು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ನಾಗರಾಜ್, ಜೈನ್, ವೆಂಕಟೇಶ್, ಕೃಷ್ಣ ಮೂರ್ತಿ ಭಾವೆ, ಶ್ರೀಧರ್ ವಿ. ಶೇಟ್, ಪ್ರಶಾಂತ್, ಸುರೇಶ್, ಟಿ.ಆರ್. ಶಿವಾನಂದ ಗಿರೀಶ್ ಎಲ್. ಸರಸ್ವತಿ ನಾವುಡ ಸೇರಿದಂತೆ ಮೊದಲಾದವರಿದ್ದರು.
ಚುನಾವಣೆ ಇಧಿಕಾರಿಯಾಗಿ ಷಣ್ಣುಖಚಾರ್ ಕಾರ್ಯ ನಿರ್ವಹಿಸಿದರು. ಸಿಬ್ಬಂದಿಗಳಾದ ರವಿಕುಮಾರ್, ಕೆ. ರಾಜಶೇಖರಪ್ಪ ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post