Read - < 1 minute
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 100 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಣೆ ಹೊರಡಿಸಿದ್ದು, ಈ ನೋಟು ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ.
ಹೊಸ ನೋಟಿನ ವಿಶೇಷತೆಗಳು ಹೀಗಿವೆ:
- 100 ರೂ. ಮುಖಬೆಲೆಯ ಹೊಸ ನೋಟು ನಸು ನೀಲಿ ಬಣ್ಣದ್ದಾಗಿರುತ್ತದೆ
- ನಿಯಮದಂತೆ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಹೊಂದಿರುತ್ತದೆ
- ದೇಶದ ಸಾಂಸ್ಕೃತಿಕ ಪಾರಂಪರಿಕ ಸ್ಥಳವಾದ ಗುಜರಾತಿನ ರಾಣಿ ಕಿ ವಾವ್ (ರಾಣಿಯ ಮೆಟ್ಟಿಲುಗಳ ಬಾವಿ) ಚಿತ್ರ ನೋಟಿನ ಹಿಂಬದಿಯಲ್ಲಿದೆ
- ಹೊಸ ನೋಟಿನ ಸುತ್ತಳತೆ 66 ಎಂಎಂ ಹಿ 142 ಎಂಎಂ ಹೊಂದಿರುತ್ತದೆ
- ಹೊಸ ನೋಟು ಈಗ ಬಳಕೆಯಲ್ಲಿರುವ ನೋಟಿಗಿಂತ ಗಾತ್ರದಲ್ಲಿ ಚಿಕ್ಕದಾಗಿರಲಿದೆ
- ಹೊಸ ನೋಟು 10 ರೂ. ಹೊಸ ನೋಟಿಗಿಂತ ತುಸು ದೊಡ್ಡ ಗಾತ್ರ ಹೊಂದಿರಲಿದೆ
- ಮಧ್ಯ ಪ್ರದೇಶದ ದೇವಸ್ ಮುದ್ರಣಾಲಯದಲ್ಲಿ ಈ ನೋಟು ಮುದ್ರಣ ಕಾರ್ಯ ನಡೆದಿದೆ
- ಹೊಸ ನೋಟು ಮುದ್ರಿಸಲು ಸ್ವದೇಶೀ ಇಂಕನ್ನೇ ಬಳಸಲಾಗುತ್ತಿದೆ
- ಆರ್‌ಬಿಐ, ಇಂಡಿಯಾ ಹಾಗೂ 100 ಎಂದು ಮೈಕ್ರೋ ಅಕ್ಷರಗಳಲ್ಲಿ ಮುದ್ರಿಸಲಾಗಿದೆ
- ನೋಟಿನ ಮುಂಭಾಗದ ಬಲಭಾಗದಲ್ಲಿ ಅಶೋಕ ಪಿಲ್ಲರ್ ಚಿತ್ರವಿದೆ
- ನೋಟು ಮುದ್ರಣದ ವರ್ಷವನ್ನು ಹಿಂಬದಿಯ ಬಲಭಾಗದಲ್ಲಿ ಮುದ್ರಿಸಲಾಗಿದೆ
- ಸ್ವಚ್ಛ ಭಾರತ್ ಲೋಗೋ ಹಾಗೂ ಸ್ಲೋಗನ್ ಹಿಂಬದಿಯಲ್ಲಿದೆ
Discussion about this post