ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಯಾವುದೇ ಚಾಲಕ ಹಿಟ್ ಅಂಡ್ ರನ್ ಮಾಡಿ, ವ್ಯಕ್ತಿಯ ಸಾವಿಗೆ ಕಾರಣವಾದರೆ ಆತನಿಗೆ 10 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸುಬಹುದಾಗಿದೆ ಎಂಬ ಭಾರತೀಯ ನ್ಯಾಯ ಸಂಹಿತೆಯಲ್ಲಿನ ನೂತನ ಕಾಯ್ದೆಯನ್ನು ಕೇಂದ್ರ ಸರ್ಕಾರದ ತಂದಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದೆ.
ಮಾಹಿತಿಯಂತೆ, ಹಿಟ್ ಅಂಡ್ ರನ್ ಮಾಡಿ ವ್ಯಕ್ತಿಯ ಜೀವಹಾನಿಗೆ ಕಾರಣವಾದ ಚಾಲಕನಿಗೆ ಸೆಕ್ಷನ್ 106-1, 106- 2 ಅಡಿಯಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ಅಪಘಾತದ ಮಾಹಿತಿ ನೀಡಿದರೆ ಕಠಿಣ ಕಾಯ್ದೆ ಅನ್ವಯ ಇಲ್ಲ ಎಂದು ಸರ್ಕಾರ ಹೇಳಿದೆ.
ಯಾವುದೇ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾಗಿ ತಪ್ಪಿಸಿಕೊಂಡರೆ ಆತನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
Also read: ಪಶ್ಚಿಮ ಬಂಗಾಳ, ಮಣಿಪುರದಲ್ಲಿ ಭೂಕಂಪನ | ಜನರಲ್ಲಿ ಆತಂಕ
ಪ್ರಮುಖ ವಿಚಾರವೆಂದರೆ, ಈ ರೀತಿ ಅಜಾಗರೂಕವಾಗಿ ಅಥವಾ ಅತಿವೇಗದಿಂದ ಚಾಲನೆ ಮಾಡಿ ಯಾವುದೇ ವ್ಯಕ್ತಿಗೆ ಅಪಘಾತ ಎಸಗಿದ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರು ಹಾಗೂ ನ್ಯಾಯಾಧೀಶರಿಗೆ ಮಾಹಿತಿ ನೀಡಿದರೆ ಹಾಗೂ ಉದ್ದೇಶಪೂರ್ವವಲ್ಲದ ಪ್ರಕರಣದಲ್ಲಿ ಈ ಕಾನೂನನ್ನು ಅನ್ವಯಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಇಂತಹ ಪ್ರಕರಣಗಳಲ್ಲಿ ಸೆಕ್ಷನ್ 106 (1) ಅನ್ವಯ ಕೇಸ್ ದಾಖಲಿಸಲಾಗುತ್ತದೆ. ಇದು ಜಾಮೀನು ಸಹಿತ ಪ್ರಕರಣವಾಗಿದ್ದು, ಇದರಡಿ ದೋಷಿಗೆ ಗರಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ವರದಿಯಾಗಿದೆ.
ಯಾವುದೇ ಚಾಲಕರು, ಅಪಘಾತದ ಬಳಿಕ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯದೇ ಮತ್ತು ಪೊಲೀಸರಿಗೆ ಮಾಹಿತಿ ನೀಡದೇ ಪರಾರಿಯಾದರೆ ಮತ್ತು ಕುಡಿದು ವಾಹನ ಚಾಲನೆ ಮಾಡಿ ಸಂಭವಿಸುವ ಅಪಘಾತ ಪ್ರಕರಣದ ವೇಳೆ ಸೆಕ್ಷನ್ 106 (2) ಅನ್ವಯ ಪ್ರಕರಣ ದಾಖಲಿಸಲಾಗುತ್ತದೆ. ಇದು ಜಾಮೀನು ರಹಿತವಾಗಿದ್ದು, ಇಲ್ಲಿ ದೋಷಿಗಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post