ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಲ್ಲಿರುವ ಪೋಸ್ಟ್ ಆಫೀಸ್ ವ್ಯವಸ್ಥೆಗಳಿಗೆ ಬ್ಯಾಂಕಿಂಗ್ ಸ್ವರೂಪ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಬಜೆಟ್’ನಲ್ಲಿ ಈ ಕುರಿತಂತೆ ಘೋಷಣೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶದ 1.4 ಲಕ್ಷ ಪೋಸ್ಟ್ ಆಫೀಸ್’ಗಳ ವ್ಯವಸ್ಥೆಗೆ ಬ್ಯಾಂಕಿಂಗ್ ಸ್ವರೂಪ ನೀಡಲಾಗುವುದು. ಪೋಸ್ಟ್ ಆಫೀಸ್’ನಿಂದ ಬ್ಯಾಂಕ್’ಗಳಿಗೆ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.
75ನೆಯ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಯುನಿಟ್ಸ್ ಆರಂಭ ಮಾಡುವ ಮೂಲಕ ಬ್ಯಾಂಕಿಂಗ್ ಯುನಿಟ್ಸ್‌ಆರಂಭ ಮಾಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದರು.
1.4ಲಕ್ಷ ಪೋಸ್ಟ್ ಆಫೀಸ್’ಗಳ ಸ್ವರೂಪ ಬದಲಿಸಿ ಎಟಿಎಂ, ಡಿಜಿಟಲ್ ಬ್ಯಾಂಕಿಂಗ್ ಸೇವೆ ನೀಡಲಾಗುವುದು. ಪೋಸ್ಟ್ ಆಫೀಸ್’ಗಳಿಗೆ ಬ್ಯಾಂಕ್ ಸ್ವರೂಪ ನೀಡುವ ಮೂಲಕ ಹಣ ವರ್ಗಾಯಿಸುವ ಸೇವೆ ನೀಡಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post