ಕಲ್ಪ ಮೀಡಿಯಾ ಹೌಸ್
ನವದೆಹಲಿ: ಕೋವಿಡ್-19 ಲಸಿಕೆಯ ಸ್ಲಾಟ್‌ಗಳನ್ನು ಈಗ ವಾಟ್ಸ್‌ಆಪ್ ಮೂಲಕವು ಬುಕ್ ಮಾಡಬಹುದು’ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ತಿಳಿಸಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
‘ಮೊದಲು ವಾಟ್ಸ್‌ಆಪ್ ಮೂಲಕ ಮೈಗಾವ್‌ಇಂಡಿಯಾ ಕೊರೊನಾ ಹೆಲ್ಪ್‌ಡೆಸ್ಕ್‌ಗೆ (MyGovIndia Corona Helpdesk) “Book Slot” ಎಂಬ ಸಂದೇಶವನ್ನು ಕಳುಹಿಸಬೇಕು. ಒಟಿಪಿ ಪರಿಶೀಲನೆ ಬಳಿಕ ಸೂಚಿಸಲಾಗುವ ಕ್ರಮಗಳನ್ನು ಅನುಸರಿಸಬೇಕು’ ಎಂದು ಅವರು ಪ್ರಕ್ರಿಯೆಯನ್ನು ವಿವರಿಸಿದರು.
‘ಹೊಸ ಯುಗದ ನಾಗರಿಕರ ಅನುಕೂಲಕ್ಕಾಗಿ ಇದನ್ನು ರೂಪಿಸಲಾಗಿದೆ. ಈಗ ಕೆಲವೇ ನಿಮಿಷಗಳೊಳಗೆ ನಿಮ್ಮ ಫೋನ್ ಮೂಲಕ ನೀವು ಸ್ಲಾಟ್ ಬುಕ್ ಮಾಡಬಹುದು. 919013151515 ಮೊಬೈಲ್ ಸಂಖ್ಯೆ ಮೂಲಕ ಲಸಿಕೆಯ ಸ್ಲಾಟ್ ಬುಕ್ ಮಾಡಿ’ ಎಂದು ಮಾಂಡವೀಯ ಟ್ವೀಟ್ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post