ಕಲ್ಪ ಮೀಡಿಯಾ ಹೌಸ್
ನವದೆಹಲಿ: ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿದಂತೆ ಆರು ಮಂದಿ ಶಂಕಿತ ಉಗ್ರರನ್ನು ಬಂಧಿಸಿ, ಅಪಾರ ಪ್ರಮಾಣದ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಮೋದ್ ಕುಷ್ವಾಹಾ ಹೇಳಿದ್ದಾರೆ.
ಪಾಕಿಸ್ತಾನದ ನಿಯಂತ್ರಿತ ಉಗ್ರ ಸಂಘಟನೆಯ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನವದೆಹಲಿ, ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಹಬ್ಬದ ದಿನಗಳಲ್ಲಿ ಸ್ಫೋಟಗಳನ್ನು ನಡೆಸಲು ಹಾಗೂ ದೇಶದ ಪ್ರಮುಖರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಈ ಭಯೋತ್ಪಾದಕರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಆರ್ಥಿಕ ನೆರವು ನೀಡುತ್ತಿರುವುದಾಗಿ ವಿಶೇಷ ತನಿಖಾದಳ ಪೊಲೀಸ್ ಅಧಿಕಾರಿ ನೀರಜ್ ಠಾಕೂರ್ ತಿಳಿಸಿದ್ದಾರೆ.
ಜೀಶನ್ ಖಮಾರ್ ಮತ್ತು ಮೊಹಮ್ಮದ್ ಅಮೀರ್ ಜಾವೇದ್ ಒಸಾಮಾ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದರು ಎನ್ನಲಾಗಿದ್ದು, ಒಸಾಮಾ ಸಾಮಿ, ಮೊಹಮ್ಮದ್ ಅಬು ಬಕರ್, ಜನ್ ಮೊಹಮ್ಮದ್ ಶೇಖ್, ಜೀಶಾನ್ ಖಮಾರ್ ಬಂಧಿತ ಉಗ್ರರು ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post