ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ತರಗತಿಗಳಲ್ಲಿ ಹಿಜಾಬ್ Hijab ಧರಿಸುವ ಕುರಿತಾಗಿ ರಾಜ್ಯದ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ Supreme Court ಸ್ಪಷ್ಟವಾಗಿ ಹೇಳಿದೆ.
ಈ ಕುರಿತಂತೆ ಅರ್ಜಿದಾರರ ಪರ ಮನವಿಯನ್ನು ಪಾಲಿಸಿದ ನ್ಯಾಯಾಲಯ ಈ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹಿಜಾಬ್ ಧರಿಸುವುದಕ್ಕೂ ಪರೀಕ್ಷೆ ಬರೆಯುದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ತುರ್ತಾಗಿ ಅರ್ಜಿ ವಿಚಾರಣೆ ನಡೆಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
Also read: ಕೋವಿಡ್‌ನಿಂದ ಮೃತಪಟ್ಟ 93 ಕುಟುಂಬಕ್ಕೆ ಅಬಕಾರಿ ಸಚಿವರಿಂದ ಪರಿಹಾರದ ಚೆಕ್ ವಿತರಣೆ
ಅರ್ಜಿದಾರರ ಪರ ಮನವಿ ಸಲ್ಲಿಸಿದ ಹಿರಿಯ ವಕೀಲ ದೇವದತ್ತ ಕಾಮತ್ ಕರ್ನಾಟಕದಲ್ಲಿ ಪರೀಕ್ಷೆಗಳು ಆರಂಭವಾಗುತ್ತಿವೆ. ವಿಚಾರಣೆ ನಡೆಸಿ ತೀರ್ಪು ಹೊರಬರುವುದು ತಡವಾದರೆ, ಪರೀಕ್ಷೆಗೆ ತೊಂದರೆಯಾಗುತ್ತದೆ. ಹೀಗಾಗಿ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು. ಈ ಮನವಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಉಚ್ಛ ನ್ಯಾಯಮೂರ್ತಿ ಎನ್.ವಿ. ರಮಣ CJI N.V. Ramana ಅವರು ಹಿಜಾಬ್‌ಗೂ ಪರೀಕ್ಷೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದ್ಯತೆಯ ಮೇರೆಗೆ ಅರ್ಜಿ ವಿಚಾರಣೆಯನ್ನು ಯಾವಾಗ ನಡೆಸಬೇಕು ಎಂದು ನ್ಯಾಯಾಲಯಕ್ಕೆ ತಿಳಿದಿರುತ್ತದೆ ಎಂದು ಮನವಿಯನ್ನು ತಿರಸ್ಕರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post