ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರಿಗೆ ಹಿಂದೆಂದೂ ಕಾಣದಂತಹ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ತಂಡಕ್ಕೆ ಈಗ ನಮ್ಮ ರಾಜ್ಯದ ಮುಧೋಳದ ನಾಯಿಗಳು Mudola Dog ಸೇರ್ಪಡೆಗೊಂಡಿವೆ.
ಹೌದು… ದೇಶದ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಪಡೆಗಳ ತಂಡಕ್ಕೆ ಕರ್ನಾಟಕದ ಹೆಮ್ಮೆಯ ತೆಳ್ಳನೆಯ ದೇಹ, ಚೂಪಾದ ಮೂಗು, ಚಿಗರೆಯಂತ ಓಟದಿಂದ ಪ್ರಸಿದ್ಧಿ ಪಡೆದಿರುವ ಮುಧೋಳದ ನಾಯಿಗಳು ಸೇರ್ಪಡೆಗೊಂಡಿರುವುದು ನಮ್ಮ ರಾಜ್ಯ ಹೆಮ್ಮೆಯ ಸಂಗತಿಯಾಗಿದೆ.

ಈಗಾಗಲೇ ಮಿಲಿಟರಿ ಸೇರಿದಂತೆ ದೇಶದ ವಿವಿಧ ರಕ್ಷಣಾ ಪಡೆಗಳ ತಂಡಕ್ಕೆ ಮುಧೋಳ ನಾಯಿಗಳು ಸೇರ್ಪಡೆಯಾಗಿವೆ. ಈಗ ಪ್ರಧಾನಿಯವರ ಭದ್ರತೆಯ ತಂಡಕ್ಕೆ ಸೇರಿಕೊಂಡಿರುವುದು ಹೆಮ್ಮೆಯ ಸಂಗತಿ.
ಮುಧೋಳ ನಾಯಿ ಪ್ರಧಾನಿ ಮೋದಿಯ ವಿಶೇಷ ರಕ್ಷಣಾ ತಂಡಕ್ಕೆ ಆಯ್ಕೆಯಾಗಿತ್ತು. ತಕ್ಷಣ ದೆಹಲಿಯಿಂದ ಬಂದ ಎಸ್’ಪಿಜಿ ತಂಡದ ಸದಸ್ಯರು 2 ಮುಧೋಳ ನಾಯಿ ಮರಿಗಳನ್ನು ಕೊಂಡೊಯ್ದು ಇದೀಗ ನವದೆಹಲಿಯಲ್ಲಿ ತರಬೇತಿ ನೀಡುತ್ತಿದ್ದಾರೆ.










Discussion about this post