ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಜಮ್ಮು ಮತ್ತು ಕಾಶ್ಮೀರದ Jammu and Kashimira ಅವಂತಿಪೋರಾದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ Terrorist ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಭಯೋತ್ಪಾದನಾ ಘಟಕವನ್ನು ಭದ್ರತಾ ಪಡೆಗಳು ಭೇದಿಸಿ, 8 ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಭದ್ರತಾ ಪಡೆಗಳ ಜಂಟಿ ತಂಡವು ಭಯೋತ್ಪಾದನಾ ಘಟಕದ ಮೇಲೆ ಧಾಳಿ ನಡೆಸಿ, ಮದ್ದುಗುಂಡುಗಳು, ಅಪಾರ ಶಸ್ತ್ರಾಸ್ತ್ರ ಸೇರಿದಂತೆ ಅಪರಾಧ ಕೃತ್ಯಕ್ಕೆ ಬಳಸಿದ್ದ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ.

ಉಗ್ರ ಸಹಚರರನ್ನು ಅವಂತಿಪೋರಾ ಉಪ ಜಿಲ್ಲೆಯ ನಿವಾಸಿಗಳಾದ ಮುಷ್ತಾಕ್ ಅಹ್ಮದ್ ದಾರ್, ಇಶ್ಫಾಕ್ ಅಹ್ಮದ್ ದಾರ್, ಮಂಜೂರ್ ಅಹ್ಮದ್ ದಾರ್, ಫಯಾಜ್ ಅಹ್ಮದ್ ರಾಥರ್, ಶಬೀರ್ ಅಹ್ಮದ್ ರಾಥರ್, ಮೊಹಮ್ಮದ್ ಲತೀಫ್ ರಾಥರ್, ಶೀರಾಜ್ ಅಹ್ಮದ್ ಮಿರ್ ಮತ್ತು ವಸೀಮ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.
Also read: ಹೋಟೆಲ್ ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ, ನಿಗದಿತ ಶುಲ್ಕ ವಿನಾಯಿತಿ: ಬೆಸ್ಕಾಂ ಭರವಸೆ

ಬಂಧಿತರು ಇಬ್ಬರು ಸಕ್ರಿಯ ಭಯೋತ್ಪಾದಕರಿಗೆ ಆಶ್ರಯ, ಲಾಜಿಸ್ಟಿಕ್ಸ್ ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















