ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಪಶುವೈದ್ಯೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ, ಭೀಕರವಾಗಿ ಸುಟ್ಟು ಹಾಕಿದ ವೇಳೆ ಯಾವುದೇ ದೂರು ದಾಖಲಿಸಿಕೊಳ್ಳದ ಮಾನವಹಕ್ಕು ಆಯೋಗ, ಈಗ ಆರೋಪಿಗಳ ಎನ್’ಕೌಂಟರ್ ನಡೆದಾಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.
ಹೌದು… ಪ್ರಿಯಾಂಕಾ ರೆಡ್ಡಿ ಅವರ ಹತ್ಯೆ ಆರೋಪಿಗಳನ್ನು ಇಂದು ಮುಂಜಾನೆ ತೆಲಂಗಾಣದಲ್ಲಿ ಹೈದರಾಬಾದ್ ಪೊಲೀಸರು ಎನ್’ಕೌಂಟರ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಮಾನವ ಹಕ್ಕು ಆಯೋಗ ತನಿಖೆಗೆ ಆದೇಶಿಸಿದೆ.
ನಾಲ್ವರು ಆರೋಪಿಗಳನ್ನು ಪೊಲೀಸರು ಎನ್’ಕೌಂಟರ್ ಮಾಡಿರುವುದು ತೀವ್ರ ಕಳವಳಕಾರಿ ಎಂದಿರುವ ಆಯೋಗ, ಈ ಕುರಿತಂತೆ ತನಿಖೆ ನಡೆಸುವುದಾಗಿ ಹೇಳಿದೆ.
Get in Touch With Us info@kalpa.news Whatsapp: 9481252093
















