ನವದೆಹಲಿ: ಉಗ್ರರ ವಿರುದ್ಧ ಹಾಗೂ ದೇಶದೊಳಗೆ ಇದ್ದುಕೊಂಡೇ ಉಗ್ರರಿಗೆ ಸಹಕಾರ ನೀಡುತ್ತಿರುವವರುವ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರದ ಕುಣಿಕೆಗೆ ಈಗ ಹುರಿಯತ್ ನಾಯಕರು ಸಿಲುಕಿದ್ದಾರೆ.
ಟೆರರ್ ಫಂಡಿಂಗ್ ವಿಚಾರದಲ್ಲಿ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ ಪುತ್ರ ನದೀಮ್ ಗಿಲಾನಿ ಹಾಗೂ ಹುರಿಯತ್ ನಾಯಕ ಮಿರ್ವಾಯಿಜ್ ಉಮರ್ ಇಬ್ಬರಿಗೂ ರಾಷ್ಟ್ರೀಯ ತನಿಖಾ ದಳ(ಎನ್’ಐಎ) ಸಮನ್ಸ್ ಜಾರಿ ಮಾಡಿದೆ. ಪ್ರಕರಣ ಕುರಿತಂತೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ದೇಶದ ಒಳಗೇ ಇದ್ದುಕೊಂಡು ಉಗ್ರವಾದಿಗಳಿಗೆ ಹಣಕಾಸಿನ ಸಹಕಾರ ನೀಡುವ ಮೂಲಕ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
Discussion about this post