ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಐ ಲವ್ ಯೂ ಚಿತ್ರಕ್ಕೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭರ್ಜರಿ ಶೂಟಿಂಗ್ ನಡೆಸಲಾಗುತ್ತಿದೆ.

ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಉಪೇಂದ್ರ ಡಾನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೈಸ್ ರಸ್ತೆಯಲ್ಲಿ ಅದ್ದೂರಿ ಹೆಲಿಕಾಪ್ಟರ್ ಬಳಸಿ ಚಿತ್ರೀಕರಣ ನಡೆಸಲಾಗುತ್ತಿದೆ.

ಉಪ್ಪಿ ಜೊತೆ ಟಗರು ಕಾನ್ ಸ್ಟೇಬಲ್ ಸರೋಜಾ ಖ್ಯಾತಿಯ ಸರೋಜ ಪಾಲ್ಗೊಂಡಿದ್ದಾರೆ.

















