ನವದೆಹಲಿ: ದೇಶದಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿರುವ ನಿಫಾ ವೈರಸನ್ನು 12 ಗಂಟೆಗಳ ಒಳಗಾಗಿ ನಿಯಂತ್ರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, 12 ಗಂಟೆಗಳ ಒಳಗೆ ನಿಫಾ ವೈರಸ್ ನಿಯಂತ್ರಿಸಲಾಗಿದೆ. ವೈರಸ್ ಹರಡಿದ ನಂತರ ವೈದ್ಯರ ತಂಡ ಕೇರಳಕ್ಕೆ ತಲುಪಿ ರೋಗದ ನಿರ್ವಹಣೆ ಕುರಿತು ಚರ್ಚಿಸಿದ್ದಲ್ಲದೆ ಅದನ್ನು ನಿಯಂತ್ರಣಕ್ಕೆ ತರಲಾಗಿದೆ, ಸ್ವತಃ ವೈಯಕ್ತಿಕವಾಗಿ ನಾನು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಏಮ್ಸ್, ಸಫ್ದರ್ ಜಂಗ್ ಆಸ್ಪತ್ರೆ, ಪುಣೆಯಲ್ಲಿನ ನ್ಯಾಷನಲ್ ವೈಜ್ಞಾನಿಕ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ವೈದ್ಯರು ಮತ್ತು ವಿಜ್ಞಾನಿಗಳು ಕೇರಳದಲ್ಲಿನ ಈ ರೋಗಾಣು ನಿಯಂತ್ರಣದ ಬಗ್ಗೆ ಗಮನಹರಿಸಿದ್ದಾರೆ ಎಂದು ವರದಿಯಾಗಿದೆ. ಮೇ ತಿಂಗಳಲ್ಲಿ ನಿಫಾ ವೈರಸ್ ನಿಂದ ಕೇರಳದಲ್ಲಿ ಸುಮಾರು 16 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.
Discussion about this post