ನವದೆಹಲಿ: ಮೋದಿ ಹಠಾವೋ, ದೇಶ್ ಬಚಾವೋ… ನನಗೆ ಇದನ್ನು ಕೇಳಿ ಗಾಬರಿಯಾಯಿತು. ಒಬ್ಬ ಮೋದಿಯನ್ನು ದೇಶದಿಂದ ತೊಲಗಿಸಲು ಇಷ್ಟೆಲ್ಲಾ ಮಾಡಬೇಕಾ? ಇದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್‌ನಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪರಿ.
ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಮುಖದಲ್ಲಿ ಅಕ್ಷರಶಃ ಬೆವರಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಇದು ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸದ ಪರೀಕ್ಷೆಯಲ್ಲ, ಬದಲಿಗೆ ಕಾಂಗ್ರೆಸ್ ಮಿತ್ರಪಕ್ಷಗಳ ವಿಶ್ವಾಸದ ಪರೀಕ್ಷೆ ಎಂದು ಲೇವಡಿ ಮಾಡಿದ್ದಾರೆ.
30 ವರ್ಷಗಳ ಬಳಿಕ ಕೇಂದ್ರದಲ್ಲಿ ಬಹುಮತದ ಸರ್ಕಾರ ಬಂದಿದೆ. ಹೀಗಿದ್ದರು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾಗಿವೆ. ಇನ್ನು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಾಗದೆ ಹೋದರೆ ಆಕಾಶ ಬಿದ್ದುಹೋಗುತ್ತದೆಯೇ ಅಥವಾ ಭೂಕಂಪವಾಗುತ್ತದೆ ಎಂದು ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟೀಕಿಸಿದರು.
2019ರಲ್ಲಿ ಮತ್ತೆ ಅಧಿಕಾರಿಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ನಮಗೆ 125 ಕೋಟಿ ಜನರ ಬೆಂಬಲವಿರುವ ಕಾರಣಕ್ಕೇ ನಾವು ಇಲ್ಲಿದ್ದೇವೆ. ಇನ್ನು 2019ರಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾದರೆ ನಾನೇ ಪ್ರಧಾನಿ ಆಗುತ್ತೇನೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಮಿತ್ರಪಕ್ಷದಲ್ಲಿ ಪ್ರಧಾನಿ ಆಗಲು ತುಂಬಾ ಜನ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ನಡೆಯನ್ನು ಟೀಕಿಸಿದ ಮೋದಿ, ಇವರಿಗೆ ಸ್ವಚ್ಛ ಭಾರತ್, ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಮೇಕ್ ಇನ್ ಇಂಡಿಯಾ, ಜಿಎಸ್ ಟಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಆಬಿರ್‌ಐ ಗೌವರ್ನರ್ ಯಾರ ಮೇಲೂ ಇವರಿಗೆ ವಿಶ್ವಾಸವಿಲ್ಲ. ಇನ್ನು ಕೇಂದ್ರ ಸರ್ಕಾರದ ಮೇಲೆ ಇನ್ನೆಲ್ಲಿ ವಿಶ್ವಾಸ ಹುಟ್ಟುತ್ತದೆ ಎಂದು ಹರಿತ ಮಾತುಗಳಿಂದ ತಿವಿದರು.
Discussion about this post