ವಿಜಯಪುರ: ರಾಜ್ಯದಲ್ಲಿ ನೂತನ ಜಿಲ್ಲೆ ರಚನೆ ಮಾಡುವ ಯಾವುದೇ ರೀತಿಯ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಇಂದು ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹ ಪರಿಹಾರ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಚರ್ಚೆ ಮಾಡಿದ್ದೇನೆ. ಸರಕಾರ ಈಗಾಗಲೇ ರೂ. 2500 ಕೋಟಿ ರೂ. ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ಬಳಿ ಸಾಕಷ್ಟು ಹಣವಿದೆ. ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡುತ್ತೇವೆ ಎಂದರು.
ಕೇಂದ್ರದಿಂದ 1200 ಕೋಟಿ ರೂ. ತಾತ್ಕಾಲಿಕ ಹಣ ಬಿಡುಗಡೆಯಾಗಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಆಲಮಟ್ಟಿ ಕೃಷ್ಣಾ ಜಲಾಶಯದ ಎತ್ತರಕ್ಕೆ ನಾವು ಬದ್ಧರಾಗಿದ್ದು, ರಾಜ್ಯದ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ. ಮುಂದಿನ ಬಜೆಟ್’ನಲ್ಲಿ ಆಲಮಟ್ಟಿಯಿಂದ ಸಂತ್ರಸ್ತರಾಗುವ 20 ಹಳ್ಳಿಗಳ ಸ್ಥಳಾಂತರಕ್ಕೆ ಹಣ ಮೀಸಲಿಡುತ್ತೇವೆ. ಮುಂದಿನ ಬಜೆಟ್’ನಲ್ಲಿ 20 ಸಾವಿರ ಕೋಟಿ ರೂ. ಹಣವನ್ನು ಮೀಸಲುಡುತ್ತೇನೆ ಎಂದರು.
ನಿನ್ನೆ ಎಲ್ಲ ಡಿಸಿಗಳೊಂದಿಗೆ ಚರ್ಚೆಸಿದ್ದು, ಪ್ರವಾಹಗಳ ಹಾನಿಯ ಸಮೀಕ್ಷೆ ಸಂಪೂರ್ಣವಾಗಿದೆ. ಅಂದಾಜು 34000 ಕೋಟಿ ರೂ.ಗಳಷ್ಟು ಪ್ರವಾಹದಿಂದ ಹಾನಿಯಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಬಳಿಕ ಪ್ರಧಾನಿ ಭೇಟಿಯಾಗಲಿವೆ ಎಂದ ಅವರು, ಪ್ರಧಾನಿ ಭೇಟಿಗೆ ಅವಕಾಶ ನಿರಾಕರಣೆ ಎಚ್’ಡಿಕೆ ಆರೋಪ ವಿಚಾರದಲ್ಲಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾಜಿ ಪ್ರಧಾನಿಯ ಮಗ ಎಂದು ಮೋದಿ ಭೇಟಿಯಾಗಿರಬಹುದು. ಕುಮಾರಸ್ವಾಮಿ ಭ್ರಮ ನಿರಸನರಾಗಿದ್ದಾರೆ. ನಾವು ಕೇಳಿದ ಕೆಲಸಗಳು ಕೇಂದ್ರದಿಂದ ಆಗುತ್ತಿವೆ. ಸಿದ್ದರಾಮಯ್ಯ ಮತ್ತು ಎಚ್’ಡಿಕೆ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದರು.
(ವರದಿ: ಡಿ.ಎಲ್. ಹರೀಶ್)
Discussion about this post