ಜಾಗತಿಕ ಶಾಂತಿಗೆ ಭಂಗ ತರುವಂತೆ ಕೆಲಸಕ್ಕೆ ಪದೇ ಪದೇ ಕೈ ಹಾಕುತ್ತಿರುವ ಉತ್ತರ ಕೊರಿಯಾದ ವರ್ತನೆಗೆ ಜಗತ್ತಿನ ಇತರೆ ರಾಷ್ಟ್ರಗಳು ಖಾರವಾಗೇ ಪ್ರತಿಕ್ರಿಯಿಸಿವೆ.
ಚೀನಾ
ಚೀನಾ ವಕ್ತಾರ ‘ಹೂ ಚುನ್ಯಿಂಗ್’ ಉತ್ತರ ಕೊರಿಯಾದ ಅಣುಪರೀಕ್ಷೆಯನ್ನು ವಿರೋಧಿಸಿದ್ದು, ಅಣ್ವಸ್ತ್ರ ನಿಶ್ಯಕ್ತೀಕರಣಕ್ಕೆ ಬದ್ಧವಾಗಿರುವಂತೆ ಮತ್ತು ಜಾಗತಿಕ ಶಾಂತಿಗೆ ಭಂಗ ತರದಂತೆ ಎಚ್ಚರಿಸಿದ್ದಾರೆ.
ಭಾರತ
ಭಾರತದ ವಿದೇಶಾಂಗ ಸಚಿವಾಲಯದ ಹಿಂದಿನ ವಕ್ತಾರ ‘ವಿಕಾಸ್ ಸ್ವರೂಪ್’ ಮಾತನಾಡಿ ಉತ್ತರ ಕೊರಿಯಾ ಅಂತರ‌್ರಾಷ್ಟ್ರೀಯ ಒಪ್ಪಂದಗಳನ್ನು ಗಾಳಿಗೆ ತೂರಿದ್ದು, ಈ ಅಣುಪರೀಕ್ಷೆ ನಡೆಸಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನಗಳಿಂದ ದೂರವಿರುವಂತೆ ಮತ್ತು ಜಾಗತಿಕ ಶಾಂತಿಯನ್ನು ಕಾಪಾಡಲು ಸಹಕರಿಸುವಂತೆ ಒತ್ತಡ ಹೇರಿದೆ ಎಂದಿದ್ದರು.
ದಕ್ಷಿಣ ಕೊರಿಯಾ
ಅಧ್ಯಕ್ಷ ‘ಪಾಕ್ ಗೆನ್-ಹೇ’ ಉತ್ತರ ಕೊರಿಯಾದ ಪ್ರಚೋದನಾತ್ಮಕ ಚಟುವಟಿಕೆಗಳ ವಿರುದ್ಧ ಸರಿಯಾದ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದಾರೆ. ದಕ್ಷಿಣ ಕೊರಿಯಾದ ಸೈನ್ಯ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಸನ್ನದ್ಧವಾಗಿದ್ದು ಉತ್ತರ ಕೊರಿಯಾ ನಮ್ಮ ತಂಟೆಗೆ ಬಂದರೆ ತಕ್ಕ ಮಾಡುವುದಾಗಿ ಹೇಳಿದ್ದಾರೆ. ಅಮೆರಿಕಾದ ಜೊತೆ ಮಾತುಕತೆ ನಡೆಯುತ್ತಿದ್ದು ಉತ್ತರ ಕೊರಿಯಾದ ಯಾವುದೇ ದಾಳಿಯನ್ನು ತಡೆಯಲು ಹೊಸ ಹೊಸ ನವೀನ ಮಾದರಿಯ ಯುದ್ಧೋಪಕರಣಗಳನ್ನು ಸನ್ನದ್ಧಗೊಳಿಸಲು ತೀರ್ಮಾನಿಸಲಾಗಿದೆ.
ವಿಶ್ವಸಂಸ್ಥೆ
ಜನವರಿ 6, 2016ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನಡೆಸಿ ಉತ್ತರ ಕೊರಿಯಾದ ನಡೆಸಿರುವ ನ್ಯೂಕ್ಲಿಯರ್ ಟೆಸ್ಟನ್ ಅಸಲಿಯತ್ತೇನು ಮತ್ತು ಅದರ ಪರಿಣಾಮಗಳೇನು ಎಂದು ಚರ್ಚಿಸಿವೆ. ಉತ್ತರ ಕೊರಿಯಾದ ಈ ನಡೆ ಜಾಗತಿಕ ಅಭದ್ರತೆಯನ್ನುಂಟು ಮಾಡುವ ಸಾಧ್ಯತೆಯಿದೆ. ಮತ್ತು ಅದನ್ನು ತಡೆಗಟ್ಟಲು ಕೊರಿಯಾದ ವಿರುದ್ಧ ವ್ಯಾಪಾರ, ವಹಿವಾಟು ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ನೀತಿಯನ್ನು ಪರಿಷ್ಕರಿಸುವುದಾಗಿ ಪ್ರಧಾನ ಕಾರ್ಯದರ್ಶಿ ಬಾನ್-ಕೀ- ಮೂನ್ ಹೇಳಿದ್ದಾರೆ.
(ಮುಂದುವರೆಯುವುದು)
Discussion about this post