ಮೋದಿಯವರ ಅಭಿಮಾನಿಗಳಿಗೆ ಧೈರ್ಯ ಹೇಳ್ತಾ ಇರಬೇಕಷ್ಟೆ. ನಾನು ಎಷ್ಟೋ ಹಿಂದೆ ಅನೇಕ ಲೇಖನಗಳನ್ನು ಮೋದಿಯವರ ಅಸ್ಥಿತ್ವ, ಆಯುಷ್ಯ, ಆರೋಗ್ಯಗಳ ಬಗ್ಗೆ ಬರೆದಿದ್ದೆ. ಇತ್ತೀಚೆಗೆ ಕೂಡಾ ಬರೆದಿದ್ದೆ. ಆದರೂ ಕೂಡಾ ನಮ್ಮ ಅಭಿಮಾನಿಗಳಿಗೆ ಭಯದ ವಾತಾವರಣವೇ ಬರಬಾರದು ಎಂದು ಕಲ್ಪ ನ್ಯೂಸ್ ನವರ ವಿನಂತಿಯ ಮೇರೆಗೆ ಬರೆಯುತ್ತಿದ್ದೇನೆ.
ಮೋದಿಯವರಿಗೆ ಈಗ ಚಂದ್ರದಶೆ. ಭಾಗ್ಯಾಧಿಪತಿ ಚಂದ್ರ ನೀಚಭಂಗ ರಾಜಯೋಗದಲ್ಲಿ ಕುಜನ ಜತೆ ಶಶಿ ಮಂಗಳ ಯೋಗದಲ್ಲಿದ್ದಾನೆ. ಆಯುಷ್ಯ ಕಾರಕ ಅತ್ಯಂತ ಬಲಿಷ್ಟನಾಗಿ ಇಚ್ಛಾಮರಣ(ಭೀಷ್ಮಾಚಾರ್ಯರಿಗೆ ಇದ್ದಂತೆ) ಯೋಗದಲ್ಲಿದ್ದಾನೆ. ಆದರೆ ಗೋಚರದ ಶನಿಯು ಅವರ ಜಾತಕದ ಸಿಂಹಸ್ಥ ಶನಿಗೆ ವಕ್ರತೆಯಿಂದ ವೃಶ್ಚಿಕದ ಫಲ ನೀಡುತ್ತಾ ನಾಳದ್ದು ಅಕ್ಟೋಬರ್ ಅಂತ್ಯದವರೆಗೆ ಸಂಚರಿಸುತ್ತಾನೆ.
ಈಗಾಗಲೇ ಸಮಗತಿಯತ್ತ ತಿರುಗಿದರೂ ಫಲ ಸ್ವಲ್ಪ ವೃಶ್ಚಿಕದ್ದು ಇದೆ. ಎರಡನೆಯದ್ದಾಗಿ ಚಂದ್ರದಶೆಯಲ್ಲಿ ಬುಧ ಭುಕ್ತಿ ನಡೆಯುವುದು. ಈ ಬುಧನು ಅಷ್ಟಮಾಧಿಪತಿಯೂ, 22 ನೆಯ ದ್ರೇಕ್ಕಾಣಾಧಿಪತಿಯೂ ಆಗಿರುವುದರಿಂದ ಹಿನ್ನಡೆಗೆ ಕಾರಣ.
ಅಲ್ಲದೆ ನರದೌರ್ಬಲ್ಯತೆಗಳನ್ನೂ ನೀಡಬಹುದು. ಅದಕ್ಕೆಲ್ಲ ವೈದ್ಯಕೀಯ ಪರಿಹಾರವೂ ಇದೆ. ಎಲ್ಲಿಯಾದರೂ ಶನಿ ದುರ್ಬಲ ಇರುತ್ತಿದ್ದರೆ ಅಪಾಯ ಹೇಳಬಹುದಾಗಿತ್ತು. ಆದರೆ ಶನಿಯು ಅತ್ಯಂತ ಬಲಿಷ್ಟನಾಗಿ ದೀರ್ಘಾಯುರೋಗ್ಯ ನೀಡುತ್ತಾನೆ. ಚಂದ್ರನ ಚತುರ್ಥ ಕೇಂದ್ರದಲ್ಲಿ ಶುಭಗ್ರಹ ಗುರುವೂ ಇರುವುದರಿಂದ ದೋಷ ಹರಣವೂ ಆಗುತ್ತದೆ. 2019 Feb ವರೆಗೆ ಈ ಬುಧ ಭುಕ್ತಿ ಇದೆ. ಇನ್ನೊಂದೆಡೆ ತನು ಕಾರಕ ರವಿಯು ಏಕಾದಶದಲ್ಲಿ ಅದೇ ಬುಧನೊಡನೆ ನಿಪುಣ ಯೋಗವನ್ನೂ ನೀಡುತ್ತಿದ್ದಾನೆ ಅಂದರೆ ಇನ್ನೇನು ಭಯ.
ಪ್ರಜಾಹಿತಕ್ಕಾಗಿ ಹೋಮ ಮಾಡಿದರೆ ಉತ್ತಮ
ಮರಣ ಭಯ ಇರುವುದು ತಪ್ಪು ಮಾಡಿದವನಿಗೆ. ಇವರು ಈ ಬುಧ ದೋಷಕ್ಕೆ ಎಂತಹ ಹೋಮ ಹವನವನ್ನೂ ಮಾಡಬೇಕಾಗಿಲ್ಲ. ಆದರೆ ದೇಶಕ್ಕಾಗಿ, ಪ್ರಜಾಹಿತಕ್ಕಾಗಿ ಮಾಡಿದರೆ ಉತ್ತಮ. ಬೆಳಗಿನಿಂದ ಸಂಜೆಯವರೆಗೆ ಸತ್ಕಾರ್ಯ ನಿರತರಾದ ಇವರು ವೈಯಕ್ತಿಕ ವಿಚಾರಕ್ಕೆ ತಾನು ಮಾಡುವ ಕರ್ಮಗಳೇ ದೇವಪ್ರೀತ್ಯರ್ಥವಾಗಿ, ಉತ್ತಮ ಆಯುರಾರೋಗ್ಯ ನೀಡುತ್ತಾನೆ. ಆದರೆ ನೀಚ ಮನುಷ್ಯರಿಗೆ ಸದ್ಬುದ್ಧಿ ಬರಲೆಂದು ಏನಾದರೂ ದೇವತಾ ಕಾರ್ಯ ಮಾಡಲಿ, ಅಡ್ಡಿಯಿಲ್ಲ.
ಮೋದಿ ಹತ್ಯೆ ಸಂಚು ಒಂದು ಅವ್ಯವಸ್ಥಿತ ಜಾಲ
2019 ರ ಫೆ.ನಂತರ ಮೋದಿಯವರ ಒಂದು ರೋಮವನ್ನೂ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅದರ ಒಳಗೆ ಇಂತಹ ಪಿತೂರಿ, ಪಾಕಿನ ಭಯೋತ್ಪಾದಕರ ತೊಂದರೆಗಳು ಬರಲಿವೆ. ಅದಕ್ಕೆ ತಕ್ಕಂತಹ ನಂಬಿಕೆಗೆ ಅರ್ಹವಾದ systematic ವ್ಯವಸ್ಥೆಗಳೂ ಇವೆ. ಮೋದಿಯವರ ಹತ್ಯೆಗೆ ನಡೆಯುವ ಸಂಚು ಅವ್ಯವಸ್ಥಿತ ಸಂಚಾಗಿರುವುದರಿಂದಲೇ ಹೀಗೆ ಸಿಕ್ಕಿಕೊಳ್ಳುವುದು. ಇದು ಇಷ್ಟಕ್ಕೇ ನಿಲ್ಲೋದೂ ಇಲ್ಲ. ಒಂದು ದೊಡ್ಡ ಮಟ್ಟದ ಕಾಳಗದವರೆಗೂ ಹೋಗಲಿದೆ. ಅಂದರೆ ವಿರೋಧಿಗಳು ಪಥನವಾಗುವ ಲಕ್ಷಣ. ಬೆಳಕನ್ನು ಕಂಡು ಹಾರಿಬರುವ ಪತಂಗಗಳು ನಾಶವಾಗುವುದು ಬೆಂಕಿಗೆ ಬಿದ್ದಾಗಲೆ ಅಥವಾ ಇನ್ಯಾವುದೋ ಆ ಪತಂಗಗಳನ್ನು ನುಂಗಿದಾಗಲೆ.
ಇದೆಲ್ಲವೂ ಮುಂದಿನ ದಿನಗಳಲ್ಲಿ ಮೋದಿಯವರು ಅಖಂಡ ಜಯಗಳಿಸುವ ಸೂಚನೆಗಳೇ ಹೊರತು ಅಪಾಯಗಳಲ್ಲ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post