ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸ್ವಯಂಸೇವಕರಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪ್ರಮುಖವಾಗಿ ಆಪ್‌ನ್ನು ಸ್ವಯಂ ಸೇವಕರ ವೇದಿಕೆಯನ್ನಾಗಿಸಿದ್ದು, ಸಣ್ಣ ಡೊನೇಶನ್‌ಗಳನ್ನೂ ಸಹ ಇದರಲ್ಲಿ ನೀಡಬಹುದಾಗಿದ್ದು, ಸ್ವಯಂ ಸೇವಕರಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಬಹುದಾಗಿದೆ.
ಇನ್ನು, ಟೀ-ಶರ್ಟ್, ಮಗ್, ಕಪ್, ನೋಟ್ ಬುಕ್ ಸೇರಿದಂತೆ ಹಲವು ವಸ್ತುಗಳನ್ನು ಖರೀಸಲ ಅವಕಾಶವನ್ನು ಕಲ್ಪಿಸಲಾಗಿದೆ.
ಈ ಕುರಿತಂತೆ ಬಿಜೆಪಿ ಐಟಿ ರಾಷ್ಟ್ರೀಯ ಉಸ್ತುವಾರಿ ಅಮಿತ್ ಮಾಲವೀಯ ಮಾತನಾಡಿದ್ದು, ಇಂದಿನ ಯುವಕ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಡಿಸೈನ್ ಮಾಡಲಾಗಿದೆ. ಈ ವಸ್ತುಗಳನ್ನು ಖರೀದಿಸುವ ಸ್ವಯಂ ಸೇವಕರು ಪಾವತಿಸುವ ಹಣವನ್ನು ಒಟ್ಟಾಗಿ ಕೂಡಿಸಿ ಕ್ಲೀನ್ ಗಂಗಾ ಯೋಜನೆಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Now, get a variety of exclusive NaMo merchandise from the NaMo App. Make a stand and wear what you believe in. Download NaMo app at https://t.co/7Lo1b4O7mq pic.twitter.com/FD0cSSjJwZ
— NarendraModi App (@NamoApp) September 18, 2018
ನಮೋ ಆಪ್ ಈಗಾಗಲೇ 10 ಮಿಲಿಯನ್‌ಗೂ ಅಧಿಕ ಚಂದಾದಾರರನ್ನು ಹೊಂದಿದೆ. 2015ರಲ್ಲಿ ಲೋಕಾರ್ಪಣೆ ಮಾಡಿದ ನಮೋ ಆಪ್ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಆಪ್ ಆಗಿದ್ದು, ಪ್ರಧಾನಿಯವರ ಕುರಿತಾಗಿ ಬಹಳಷ್ಟು ವಿಚಾರಗಳನ್ನು ಸ್ವತಃ ಅವರೇ ಅಪ್‌ಡೇಟ್ ಮಾಡುತ್ತಾರೆ.
ಅತ್ಯಂತ ಪ್ರಮುಖವಾಗಿ ದೇಶದ ಅಭಿವೃದ್ಧಿ ವಿಚಾರದ ನಮ್ಮ ಚಿಂತನೆಗಳನ್ನು ಈ ಆಪ್ ಮೂಲಕ ಜನ ಸಾಮಾನ್ಯರು ಪ್ರಧಾನಿ ಮೋದಿ ಅವರಿಗೆ ನೇರವಾಗಿ ತಿಳಿಸುವ ಅವಕಾಶವಿದೆ.
Discussion about this post