ಕಲ್ಪ ಮೀಡಿಯಾ ಹೌಸ್ | ನ್ಯಾಮತಿ |
ಹಿಂದಿನ ಕಾಲದಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿಯಿಂದ ಶಿಕ್ಷಣ ಪಡೆದ ಮಕ್ಕಳು ಯೋಗ್ಯ ಶಿಕ್ಷಣವನ್ನು ಪಡೆದು ಸುಸಂಸ್ಕೃತರಾಗಿ ಹೊರಬರುತಿದ್ದರು ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮಶಿಕ್ಷಣ ಇಲ್ಲದಿರುವುದರಿಂದ ಮಕ್ಕಳಿಗೆ ಯೋಗ್ಯ ಸಂಸ್ಕಾರ ಸಿಗುತ್ತಿಲ್ಲ ಹೀಗಾಗಿ ಪಾಲಕರು ತಮ್ಮ ಮನೆಯಲ್ಲಿಯೇ ಧರ್ಮಾಚರಣೆಯನ್ನು ಕಲಿಸಬೇಕಿದೆ ಎಂದರು.
ನ್ಯಾಮತಿ ಪಟ್ಟಣದ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಶ್ರೇಷ್ಠ ಪರಂಪರೆಯಲ್ಲಿ ಗುರುಶಿಷ್ಯ ಪರಂಪರೆಗೆ ತುಂಬಾ ಮಹತ್ವದ ಸ್ಥಾನವಿದೆ, ಇಂದಿನ ಕಾಲದಲ್ಲಿ ಸಮಾಜಕ್ಕೆ ಗುರುಗಳ ಮಾರ್ಗದರ್ಶನ ಇಲ್ಲದಿರುವುದರಿಂದ ಎಲ್ಲೆಡೆ ಭ್ರಷ್ಟಾಚಾರ, ಮೋಸ, ಹಿಂಸೆ, ಕೊಲೆಗಳಂತಹ ಕೃತ್ಯಗಳನ್ನು ದಿನನಿತ್ಯ ನೋಡುತ್ತಿದ್ದೇವೆ, ಹೀಗಾಗಿ ಇಂದಿನ ಸಮಾಜಕ್ಕೆ ಗುರುಗಳ ಮಾರ್ಗದರ್ಶನ ಅತ್ಯಂತ ಅವಶ್ಯಕವಾಗಿದ್ದು ಗುರುಗಳು ಸಮಾಜಕ್ಕೆ ಕೇವಲ ಮಾರ್ಗ ದರ್ಶನ ಮಾಡುವುದಷ್ಟೇ ಅಲ್ಲದೇ ಮೋಕ್ಷದ ದಾರಿಯನ್ನೂ ತೋರಿಸುತ್ತಾರೆ, ಹೀಗಾಗಿ ಯೋಗ್ಯ ಗುರುಗಳ ಮಾರ್ಗದರ್ಶನ ಪಡೆಯುವುದು ಅಗತ್ಯ ಎಂದರು.
ಧರ್ಮಚಾರಣೆಯಿಂದ ಮಾತ್ರ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ:
ಇಂದು ಹಿಂದೂ ಸಮಾಜ ಧರ್ಮಶಿಕ್ಷಣದಿಂದ ವಂಚಿತರಾಗಿರುವ ಕಾರಣ ಕುಟುಂಬ ವ್ಯವಸ್ಥೆಯೂ ಸಹ ಹಾಳಾಗುತ್ತಿರುವುದು ಕಂಡುಬರುತ್ತಿದೆ, ತಂದೆ ತಾಯಿಯರ ಸೇವೆಮಾಡಿ ಪುತ್ರಧರ್ಮವನ್ನು ಪಾಲನೆಮಾಡಬೇಕಿದ್ದ ಮಗ ಇಂದು ತನ್ನ ವಯಸ್ಸಾದ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ, ಪತಿಪತ್ನಿಯರಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ, ಇಂದು ತಂದೆ ತಾಯಿಯರಿಂದ ಯೋಗ್ಯ ಸಂಸ್ಕಾರಗಳು ಸಿಗದೇ ಮಕ್ಕಳು ದುಶ್ಚಟಗಳಿಗೆ ದಾಸರಾಗುತ್ತಿರುವುದನ್ನು ನೋಡುತ್ತಿದ್ದೇವೆ, ಕುಟುಂಬದ ವ್ಯವಸ್ಥೆಯಲ್ಲಿನ ಈ ಪರಿಣಾಮವು ಸಮಾಜವ್ಯವಸ್ಥೆಯ ಮೇಲೂ ಬೀಳುತ್ತಿದೆ.
Also read: ಪ್ರಧಾನಿ ಉದ್ಘಾಟಿಸಿದ 14,850 ಕೋಟಿ ರೂ. ವೆಚ್ಚದ ಬುಂದೇಲ್‌ಖಂಡ್ ಎಕ್ಸ್’ಪ್ರೆಸ್ ಹೈವೇ ಹೇಗಿದೆ ನೋಡಿ
ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರವೆಂದರೆ ನಾವು ಧರ್ಮ ಶಿಕ್ಷಣವನ್ನು ಪಡೆದು ಧರ್ಮಾಚರಣೆಯ ಪಾಲನೆಯನ್ನು ಮಾಡುವುದು ಮತ್ತು ಹಿಂದೂ ಸಮಾಜಕ್ಕೂ ಸಹ ಧರ್ಮಶಿಕ್ಷಣವನ್ನು ನೀಡಲು ಪ್ರಯತ್ನ ಮಾಡಬೇಕಿದೆ, ಇದುವೇ ನಾವು ಗುರುಗಳಿಗೆ ನೀಡಬೇಕಾದ ನಿಜವಾದ ಗುರುದಕ್ಷಿಣೆಯಾಗಿದೆ ಎಂದರು
ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರದ ಪೂಜೆ ಮಾಡಲಾಯಿತು. ಸನಾತನ ಸಂಸ್ಥೆಯ ಸೌ. ಶ್ರೀದೇವಿ ಆಚಾರ್ ಇವರು ಪರಾತ್ಪರ ಗುರು ಡಾ. ಜಯಂತ ಬಾಲಾಜಿ ಅಠವಲೆ ಯವರ ಸಂದೇಶ ವಾಚಿಸಿದರು. ಮತ್ತು ಸನಾತನದ ಆಧ್ಯಾತ್ಮಿಕ, ಆಯುರ್ವೇದ ಮತ್ತು ರಾಷ್ಟ ಮತ್ತು ಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಶ್ರೀಧರ್, ಸೌ. ವಿಶಾಲಾಕ್ಷಿ ಲಿಂಗರಾಜ್, ಶಿವಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post