ಬೆಂಗಳೂರು: ಈ ಬಾರಿಯ ದಸರಾಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಇನ್ಫೋಸಿಸ್ ಸಂಸ್ಥಾಪಕರಾದ ಡಾ.ಸುಧಾಮೂರ್ತಿ ಅವರಿಗೆ ಇಂದು ಅಧಿಕೃತ ಆಹ್ವಾನ ನೀಡಲಾಯಿತು.
ಇಂದು ವಿಶ್ವವಿಖ್ಯಾತ ದಸರಾ 2018ರ ಉದ್ಘಾಟಕರಾದ ಶ್ರೀಮತಿ ಸುಧಾ ನಾರಾಯಣ ಮೂರ್ತಿ ಯವರನ್ನು ಅಧಿಕೃತವಾಗಿ ಆಹ್ವಾನಿಸಿದೆ.
Today, invited Smt Sudha Narayana Murthy – founder of Infosys Foundation @ Bengaluru to inaugurate "Nada Habba Mysuru Dasara 2018" on Oct 10.@KarnatakaVarthe @Mysurudasara18 pic.twitter.com/AAlof4MDKR
— GT Devegowda (@GTDevegowda) October 3, 2018
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮಾಜಿ ಸಚಿವ ರಾಮದಾಸ್ ಅವರುಗಳ ತಂಡ ಬೆಂಗಳೂರಿನ ಜಯನಗರದ ಇನ್ಫೋಸಿಸ್ ಫೌಂಡೇಶನ್ ಕಚೇರಿಗೆ ತೆರಳಿ ಸುಧಾಮೂರ್ತಿಯವರಿಗೆ ಮೈಸೂರು ಪೇಟ, ರೇಷ್ಮೆ ಶಾಲು ಹೊದಿಸಿ, ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಿದ್ದಾರೆ.
ಇಂದು ವಿಶ್ವವಿಖ್ಯಾತ ದಸರಾ 2018ರ ಉದ್ಘಾಟನೆಗಾಗಿ ಮುಖ್ಯಮಂತ್ರಿ ಶ್ರೀ @hd_kumaraswamy ಯವರನ್ನು ಅಧಿಕೃತವಾಗಿ ಆಹ್ವಾನಿಸಿದೆ. ಈ ವೇಳೆ ಸಚಿವ ಸಾರಾ ಮಹೇಶ್, ಶಾಸಕರಾದ ಹೆಚ್ ವಿಶ್ವನಾಥ್,ಡಿಸಿ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.@CMofKarnataka @KarnatakaVarthe pic.twitter.com/O9plER2bTt
— GT Devegowda (@GTDevegowda) October 3, 2018
ಅದೇ ರೀತಿ, ದಸರಾ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರುಗಳಿಗೂ ಸಹ ಆಹ್ವಾನ ನೀಡಲಾಯಿತು.
ಇಂದು ವಿಶ್ವವಿಖ್ಯಾತ ದಸರಾ 2018ರ ಉದ್ಘಾಟನೆಗಾಗಿ ಉಪ ಮುಖ್ಯಮಂತ್ರಿ ಶ್ರೀ @DrParameshwara ಅವರನ್ನು ಅಧಿಕೃತವಾಗಿ ಆಹ್ವಾನಿಸಿದೆ. ಈ ಸಂದರ್ಭದಲ್ಲಿ ಸಚಿವರಾದ ಸಾರಾ ಮಹೇಶ್, ಜಿಲ್ಲಾಧಿಕಾರಿ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.@KarnatakaVarthe @Mysurudasara18 pic.twitter.com/KVSaYcx9md
— GT Devegowda (@GTDevegowda) October 3, 2018
Discussion about this post