ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೈದರಾಬಾದ್: ತೆಲಂಗಾಣದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಒಂದೊಂದೇ ವಿಚಾರಗಳು ಹೊರಬೀಳುತ್ತಿದ್ದು, ಈ ಮಾಹಿತಿಗಳು ಎಂತಹರನ್ನೂ ಬೆಚ್ಚಿ ಬೀಳಿಸುವಂತಿದೆ.
ಅಮಾಯಕ ವೈದ್ಯೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ನಾಲ್ವರು ರಾಕ್ಷಸರು ಆಕೆ ಜೀವಬಿಟ್ಟ ನಂತರವೂ ಸಹ ಆಕೆಯ ಶವಕ್ಕೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಪ್ರಕರಣ ಕುರಿತಂತೆ ಪೊಲೀಸರು ನ್ಯಾಯಾಲಯಕ್ಕೆ ರಿಮ್ಯಾಂಡ್ ರಿಪೋರ್ಟ್ ಸಲ್ಲಿಸಿದ್ದು, ಇದರಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.
ಆರೋಪಿಗಳಾದ ಮೊಹಮ್ಮದ್, ಜೊಲ್ಲು ಶಿವ, ಜೊಲ್ಲು ನವೀನ್ ಹಾಗೂ ಚೆನ್ನಕೇಶವಲು ಅವರುಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಮತ್ತು ಬರುವಂತಹ ತಂಪುಪಾನೀಯ ಕುಡಿಸಿ, ಅತ್ಯಾಚಾರ ಮಾಡಿ, ಆನಂತರ ಆಕೆಯ ತಲೆಗೆ ಹೊಡೆದು ಸಾಯಿಸಿದ್ದಾರೆ. ಆದರೆ, ಆಕೆಯ ಜೀವ ಹೋದ ನಂತರವೂ ಬಿಡದ ಈ ಕಾಮ ಪಿಪಾಸುಗಳು ಆಕೆಯ ಶವವನ್ನು ಲಾರಿ ಕ್ಯಾಬೀನ್’ಗೆ ಎಳೆದೊಯ್ದು ಒಬ್ಬರ ನಂತರ ಒಬ್ಬರಂತೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.
ಆನಂತರ ಆಕೆಯ ಶವವನ್ನು ಬ್ಲಾಂಕೆಟ್’ನಲ್ಲಿ ಸುತ್ತಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post