ಕಲ್ಪ ಮೀಡಿಯಾ ಹೌಸ್ | ಬೆಳಗಾವಿ ಸುವರ್ಣಸೌಧ |
ಭದ್ರಾವತಿಯಲ್ಲಿರುವ #Bhadravathi ಮೈಸೂರು ಕಾಗದ ಕಾರ್ಖಾನೆಯ #MysorePaperMills ಪುನರಾರಂಭಕ್ಕೆ ಸರ್ಕಾರವು ಸಕಾರಾತ್ಮಕವಾಗಿ ಚಿಂತನೆ ನಡೆಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ #MBPatil ಇಂದು ವಿಧಾನ ಪರಿಷತ್’ನಲ್ಲಿ ತಿಳಿಸಿದರು.
ಸದಸ್ಯ ಎಸ್. ರುದ್ರೇಗೌಡ #SRudreGowda ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು , ಮೈಸೂರು ಕಾಗದ ಕಾರ್ಖಾನೆಯು ತೀವ್ರ ತರಹದ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಕಾರಣ ಎಲ್ಲಾ ಉತ್ಪಾದನಾ ಘಟಕಗಳನ್ನು 21-11-2015 ರಿಂದ ಸ್ಥಗಿತಗೊಳಿಸಿದ್ದು, ಜೂನ್ 2023 ಅಂತ್ಯಕ್ಕೆ ಒಟ್ಟು ಸಂಚಿತ ನಷ್ಠ 1482 ಕೋಟಿ ರೂ. ಆಗಿದೆ ಎಂದು ತಿಳಿಸಿದರು.
ಸರ್ಕಾರವು ಕಾರ್ಖಾನೆಯ ಪುನರುಜ್ಜೀವನ ಸಾಧ್ಯವಿಲ್ಲವೆಂದು ತೀರ್ಮಾನಿಸಿ ಕಾರ್ಖಾನೆಯ ಕಾರ್ಯಚಟುವಟಿಕೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕೆಂದು ತೀರ್ಮಾನ ಕೈಗೊಂಡು, ಈ ಪ್ರಕ್ರಿಯೆಗಳಿಗೆ ಮೆ. ಐಡೆಕ್ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಆರ್’ಎಫ್’ಕ್ಯೂ #RFQ ಅನ್ನು ಎಪ್ರಿಲ್ 2017,ಆಗಸ್ಟ್ 2018 ಹಾಗೂ ಮಾರ್ಚ್ 2019 ರಲ್ಲಿ ಪ್ರಕಟಿಸಲಾಗಿತ್ತು. ಆರ್’ಎಫ್’ಕ್ಯೂಗೆ ಯಾವುದೇ ಅರ್ಜಿ ಸ್ವೀಕೃತವಾಗಿರುವುದಿಲ್ಲ. ಆರ್’ಎಫ್’ಕ್ಯೂ ಅನ್ನು ಕಂಪನಿಯು ಮೊದಲೇ ಅಪ್ರೋಡ್ ಮಾಡಲಾಗಿದ್ದು ಆರ್’ಎಫ್’ಕ್ಯೂಗಾಗಿ ಪ್ರಚಾರವನ್ನು ಮತ್ತು ಈಗಾಗಲೇ ವ್ಯಾಪಕ ನೀಡಲಾಗಿರುವುದರಿಂದ ಪ್ರಸ್ತಾವನೆಗಾಗಿ ವಿನಂತಿಯನ್ನು (ಆರ್‌ಎಫ್’ಟಿ) ನೇರವಾಗಿ ದಿನಾಂಕ: 25.11.2020 ರಂದು ಅಪ್ರೋಡ್ ಮಾಡಲಾಗಿದ್ದು, ಇ-ಟೆಂಡರ್ #ETender ತೆರೆದಾಗ ಯಾವುದೇ ಸ್ವೀಕೃತವಾಗಿರುವುದಿಲ್ಲ ಎಂದರು.
ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪೆನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸಿರುತ್ತಾರೆ. ಅದರಂತೆ, ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಮತ್ತು ಬಾಕಿ ಉಳಿದಿರುವ 1102 ಕೋಟಿಗಳ ಹೊಣೆಗಾರಿಕೆಗಳ ಕುರಿತು ಸರ್ಕಾರವು ತೀರ್ಮಾನ ತೆಗೆದು ಕೊಳ್ಳಬೇಕಾಗಿರುತ್ತದೆ ಎಂದರು.
2023ರ ಜುಲೈ 7ರಂದು ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯದಂತೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ 2023ರ ನವೆಂಬರ್ 17ರಂದು ಸಭೆ ನಡೆಸಲಾಗಿದ್ದು, ಅದರಂತೆ ಅರಣ್ಯ ಇಲಾಖೆಯ ತಜ್ಞರ ಸಮಿತಿಯು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ನೀಡುವ ಸಂಬಅಧ ಪರಿಶೀಲಿಸಿ ವರದಿ ನೀಡಬೇಕಾಗಿದೆ. ಕಂಪನಿಯ ಸಾಲಗಳು/ಬಾಕಿಗಳ ಕುರಿತು ಆರ್ಥಿಕ ಇಲಾಖೆಯೊಡನೆ ಸಮಾಲೋಚಿಸಲಾಗುತ್ತಿದೆ ಎಂದರು.
ಈ ಕಾರ್ಖಾನೆಯ ಭೂ ಪ್ರದೇಶವನ್ನು ಮೈಸೂರು ಕಾಗದ ಕಾರ್ಖಾನೆಯು ಸಂರಕ್ಷಿಸಿದ್ದು, ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸುವುದರಿಂದ, ಅದರಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದ್ದು, ತದನಂತರ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post