ನಾಗಪುರ: ಆಸ್ಟ್ರೇಲಿಯಾ ವಿರುದ್ಧ ನಡೆದ ೨ನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್’ಗಳ ಅಚಾನಕ್ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 250 ರನ್ ಗಳಿಗೆ ಆಲೌಟ್ ಆಗಿತ್ತು. 251 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಗೆ ಗೆಲುವು ಸುಲಭವಾಗಿತ್ತು. ಆದರೆ ಟೀಂ ಇಂಡಿಯಾ ಬೌಲರ್ ಗಳ ನಿರ್ದಿಷ್ಠ ಬೌಲಿಂಗ್ ದಾಳಿಯಿಂದ 242 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಕೇವಲ 8 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಅಂತಿಮವಾಗಿ ಕಾಂಗರೂಗಳು 49.3 ಓವರ್‌ಗಳಲ್ಲಿ 242 ರನ್‌ಗಳಿಗೆ ಸರ್ವಪತನಗೊಂಡಿತು.
👏👏👏#INDvAUS pic.twitter.com/OTkDUVG25u
— BCCI (@BCCI) March 5, 2019
ಸ್ಲಾಗ್ ಓವರ್‌ಗಳಲ್ಲಿ ಆಸೀಸ್‌ನ ಹೋರಾಟವನ್ನು ಶಿಸ್ತಿನ ಬೌಲಿಂಗ್ ಮೂಲಕ ನಿಯಂತ್ರಿಸಿದ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು 2ನೆಯ ಏಕದಿನ ಪಂದ್ಯದಲ್ಲಿ 8 ರನ್‌ಗಳಿಂದ ಮಣಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 500 ಗೆಲುವುಗಳ ಸಂಭ್ರಮ ಆಚರಿಸಿದೆ. ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಬಳಿಕ 500 ಜಯ ಸಾಧಿಸಿದ ಏಕೈಕ ತಂಡ ಭಾರತ. ಆಸ್ಟ್ರೇಲಿಯಾ ತಂಡ ೫೫೮ ಏಕದಿನ ಗೆಲ್ಲುವ ಮೂಲಕ ಅಗ್ರಸ್ಥಾನದಲ್ಲಿದೆ.
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಹೈದರಾಬಾದ್ ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು.
Discussion about this post