ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ತಾಲೀಮಿನಲ್ಲಿ ತೊಡಗಿಕೊಂಡಿದ್ದ ಎರಡು ಯುದ್ಧವಿಮಾನಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ.
#WATCH Two aircraft of Surya Kiran Aerobatics Team crashed today at Yelahanka airbase in Bengaluru, during rehearsal for #AeroIndia2019. One civilian hurt. Both pilots ejected, the debris has fallen near ISRO layout, Yelahanka new town area. #Karnataka pic.twitter.com/gJHWx6OtSm
— ANI (@ANI) February 19, 2019
ಏರೋ ಇಂಡಿಯಾ 2019ರ ನಿಮಿತ್ತ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಸೇನೆಯ ಯುದ್ಧ ವಿಮಾನಗಳು ತಾಲೀಮಿನಲ್ಲಿ ನಿರತವಾಗಿತ್ತು. ಈ ವೇಳೆ ಸೇನೆಯ ಸೂರ್ಯಕಿರಣ್ ಯುದ್ಧ ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದು ಪತನವಾಗಿವೆ. ಈ ವೇಳೆ ವಾಯುನೆಲೆಯ ಕಾಪೌಂಡ್ ಬಳಿ ವಿಮಾನಗಳು ಹೊತ್ತಿ ಉರಿದು ಬಿದ್ದಿದ್ದು, ಬೆಂಕಿ ಕೆನ್ನಾಲಿಗೆಗೆ ಸಮೀಪದ ಒಂದು ಮನೆಯ ಗೋಡೆ ಹಾಗೂ ಹಸುವಿನ ಕೊಟ್ಟಿಗೆಗೆ ಬೆಂಕಿ ಬಿದ್ದಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
#WATCH Two aircraft of the Surya Kiran Aerobatics Team crash at the Yelahanka airbase in Bengaluru, during rehearsal for #AeroIndia2019. More details awaited. pic.twitter.com/kX0V5O0n6R
— ANI (@ANI) February 19, 2019
ಸೂರ್ಯಕಿರಣ್ ಎಂಬುದು ಭಾರತೀಯ ವಾಯುಸೇನೆಗೆ ಸೇರಿರುವ ಲಘುಯುದ್ಧ ವಿಮಾನವಾಗಿದೆ. ಇಂದು ಬೆಳಿಗ್ಗೆ ಈ ಯುದ್ಧ ವಿಮಾನಗಳು ತಾಲೀಮಿನಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಏಕಾಏಕಿ ಪರಸ್ಪರ ಢಿಕ್ಕಿ ಹೊಡೆದುಕೊಂಡವು ಮತ್ತು ತಕ್ಷಣವೇ ಈ ವಿಮಾನಗಳು ಭೂಮಿಗೆ ಅಪ್ಪಳಿಸಿದವು. ಆದರೆ ಈ ಸಂದರ್ಭದಲ್ಲಿ ಎರಡೂ ವಿಮಾನಗಳ ಪೈಲಟ್ ಗಳು ತುರ್ತುನಿರ್ಗಮನ ದ್ವಾರದ ಮೂಲಕ ಹೊರಜಿಗಿದ ಕಾರಣ ಅವರಿಗೆ ಯಾವುದೆ ಅಪಾಯ ಉಂಟಾಗಲಿಲ್ಲ. ಪರಸ್ಪರ ಢಿಕ್ಕಿ ಹೊಡೆದುಕೊಂಡ ವಿಮಾನಗಳು ಜನವಸತಿ ಪ್ರದೇಶದ ಮೇಲೆಯೇ ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಓರ್ವ ನಾಗರಿಕನಿಗೂ ಗಾಯಗಳಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
Fire in factory campus open place for empty oil tins stock at kuduregere main road near Bangalore international exhibition centre madavara. Fire tenders and Staffs on spot, fire under control. @DGP_FIRE @SunilagarwalI @KarnatakaVarthe pic.twitter.com/ormIw6ntAI
— Karnataka Fire Dept (@KarFireDept) February 13, 2019
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಾಳೆಯಿಂದ ಆರಂಭವಾಗಬೇಕಿದ್ದು, 170 ಕ್ಕೂ ಹೆಚ್ಚು ಕಂಪೆನಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಇದರಲ್ಲಿ ೩೫ ವಿದೇಶಿ ವೈಮಾನಿಕ ಕಂಪೆನಿಗಳು ಎನ್ನಲಾಗಿದೆ.
We are #ready, Are you ?#suryakiran #bengaluru pic.twitter.com/8uoYmJSMFz
— Suryakiran Aerobatic Team (@Suryakiran_IAF) February 17, 2019
ಢಿಕ್ಕಿ ಬಳಿಕ ಎರಡೂ ಯುದ್ಧ ವಿಮಾನಗಳು ಹೊತ್ತಿ ಉರಿದ ಕಾರಣ ಆ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಏರ್ ಶೋಗೆ ಒಂದು ದಿನ ಬಾಕಿಯಿರುವಾಗಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
This was the manoeuvre. The upper jet (inverted) was flying with a single pilot. The lower one with both seats occupied. pic.twitter.com/YbMJhOVabc
— Angad Singh (@zone5aviation) February 19, 2019
ಎರಡು ಸೂರ್ಯ ಕಿರಣ್ ವಿಮಾನಗಳ ನಡುವೆ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ತನಿಖೆಗೆ ಆದೇಶಿಸಿದೆ.
Two suryakiran aircraft have just collided. I see smoke and saw two chutes. No word on anything more at the moment. pic.twitter.com/WZwHp1Tyyp
— Angad Singh (@zone5aviation) February 19, 2019
Discussion about this post