ಕಲ್ಪ ಮೀಡಿಯಾ ಹೌಸ್ | ಬಾಣಸವಾಡಿ |
ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು, ನೈರುತ್ಯ ರೈಲ್ವೆಯು ಬಾಣಸವಾಡಿ ಮತ್ತು ತುಮಕೂರು ನಡುವೆ 2026ರ ಮಾರ್ಚ್ 22ರಂದು ಒಂದು ಟ್ರಿಪ್ ಮೆಮು ವಿಶೇಷ ರೈಲು #MemuSpecialTrain ಸೇವೆಯನ್ನು ಓಡಿಸಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಹಿತಿ ನೀಡಿದ್ದು, ವಿವರ ಇಂತಿದೆ.
06589 ಸಂಖ್ಯೆಯ #Banasavadi ಬಾಣಸವಾಡಿ-ತುಮಕೂರು ಮೆಮು ವಿಶೇಷ ರೈಲು 2026ರ ಮಾರ್ಚ್ 22ರಂದು ಮಧ್ಯಾಹ್ನ 03.30 ಗಂಟೆಗೆ ಬಾಣಸವಾಡಿಯಿಂದ ಹೊರಟು ಸಾಯಂಕಾಲ 05.15 ಗಂಟೆಗೆ ತುಮಕೂರನ್ನು ತಲುಪಲಿದೆ.
06590 ಸಂಖ್ಯೆಯ #Tumkur ತುಮಕೂರು- ಬಾಣಸವಾಡಿ ಮೆಮು ವಿಶೇಷ ರೈಲು 2026ರ ಮಾರ್ಚ್ 22ರಂದು ಸಾಯಂಕಾಲ 05.45 ಗಂಟೆಗೆ ತುಮಕೂರಿನಿಂದ ಹೊರಟು ರಾತ್ರಿ 07.40 ಗಂಟೆಗೆ ಬಾಣಸವಾಡಿಯನ್ನು ತಲುಪಲಿದೆ. ಈ ತುಮಕೂರು – ಬಾಣಸವಾಡಿ ಮೆಮು ವಿಶೇಷ ರೈಲಿಗೆ ಯಶವಂತಪುರ ನಿಲ್ದಾಣದಲ್ಲಿಯೂ ಸಹ ನಿಲುಗಡೆ ಒದಗಿಸಲಾಗಿದೆ.
ಈ ಮೆಮು ವಿಶೇಷ ರೈಲಿಗೆ ಹೆಬ್ಬಾಳ, ಚಿಕ್ಕಬಾಣಾವರ, ಗೊಲ್ಲಹಳ್ಳಿ, ದೊಡ್ಡಬೆಲೆ, ನಿಡವಂದ, ಹಿರೇಹಳ್ಳಿ ಮತ್ತು ಕ್ಯಾತ್ಸಂದ್ರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















