ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಗಣೇಶ ಚತುರ್ಥಿಯ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆ ಎಸ್’ಎಸ್’ಎಸ್ ಹುಬ್ಬಳ್ಳಿ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಗಣೇಶ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಒತ್ತಡವನ್ನು ನಿರ್ವಹಿಸಲು ಈ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಯಾವತ್ತು ಸಂಚರಿಸಲಿದೆ?
07341 ಸಂಖ್ಯೆಯ ವಿಶೇಷ ರೈಲು ಎಸ್’ಎಸ್’ಎಸ್ ಹುಬ್ಬಳ್ಳಿ-ಮಂಗಳೂರು ಸೆಂಟ್ರಲ್ ಎಕ್ಸ್’ಪ್ರೆಸ್ ವಿಶೇಷ ರೈಲು ಆಗಸ್ಟ್ 26, 2025 ರಂದು (ಮಂಗಳವಾರ) ಸಂಜೆ 4:00 ಗಂಟೆಗೆ ಎಸ್’ಎಸ್’ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಿಗ್ಗೆ 11:45 ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07342 ಆಗಸ್ಟ್ 27, 2025 ರಂದು (ಬುಧವಾರ) ಮಧ್ಯಾಹ್ನ 2:15 ಕ್ಕೆ ಮಂಗಳೂರು ಸೆಂಟ್ರಲ್’ನಿಂದ ಹೊರಟು ಮರುದಿನ ಬೆಳಿಗ್ಗೆ 09:45 ಕ್ಕೆ ಎಸ್’ಎಸ್’ಎಸ್ ಹುಬ್ಬಳ್ಳಿಗೆ ಆಗಮಿಸುತ್ತದೆ.
ಮಾರ್ಗಮಧ್ಯೆ ರೈಲು ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ.
ಎಷ್ಟು ಬೋಗಿಗಳು ಇರಲಿವೆ?
ಈ ರೈಲು 17 ಬೋಗಿಗಳೊಂದಿಗೆ ಚಲಿಸಲಿದ್ದು, 01 ಎಸಿ ಎರಡು ಶ್ರೇಣಿ, 01 ಎಸಿ ಮೂರು ಶ್ರೇಣಿ, 10 ಸ್ಲೀಪರ್ ಕೋಚ್, 03 ಸಾಮಾನ್ಯ ಎರಡನೇ ವರ್ಗ ಮತ್ತು 02 ಎರಡನೇ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳನ್ನು ಅಂಗವಿಕಲ ಸ್ನೇಹಿ ವಿಭಾಗದೊಂದಿಗೆ ಒಳಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ಭಾರತೀಯ ರೈಲ್ವೆ ವೆಬ್’ಸೈಟ್’ಗೆ ಭೇಟಿ ನೀಡಬಹುದು ಅಥವಾ ರೈಲ್ವೆ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಬಹುದು.

ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ರೈಲ್ವೆ ಮಂಡಳಿಯು ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ರೈಲನ್ನು (ರೈಲು ಸಂಖ್ಯೆ 07377/07378) ನಿಯಮಿತ ಎಕ್ಸ್’ಪ್ರೆಸ್ ಸೇವೆಗೆ ಉನ್ನತೀಕರಿಸಲು ಅನುಮೋದನೆ ನೀಡಿದೆ.
ಈ ರೈಲುಗಳು ಇನ್ನು ಮುಂದೆ ರೈಲು ಸಂಖ್ಯೆ 17377/17378 ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್’ಪ್ರೆಸ್ ಎಂದು ಸಂಚರಿಸಲಿವೆ.
ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್’ಪ್ರೆಸ್ ತನ್ನ ನಿಯಮಿತ ಸೇವೆಯನ್ನು ಸೆಪ್ಟೆಂಬರ್ 1, 2025 ರಿಂದ ಪ್ರಾರಂಭಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್’ಪ್ರೆಸ್ ಸೆಪ್ಟೆಂಬರ್ 2, 2025 ರಿಂದ ತನ್ನ ಸಂಚಾರ ಆರಂಭಿಸಲಿದೆ. ಈ ಎರಡೂ ರೈಲುಗಳು ಈಗಿರುವ ವೇಳಾಪಟ್ಟಿ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ನಿರ್ವಹಣಾ ಮಾದರಿಯೊಂದಿಗೆ ಸಂಚರಿಸಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post