ಹೂಸ್ಟನ್: ವಿಶ್ವನಾಯಕರಾಗಿ ಬೆಳೆದಿರುವ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಅಮೆರಿಕಾ ಪ್ರವಾಸದಲ್ಲಿರುವ ವೇಳೆ ಮತ್ತೊಮ್ಮೆ ತಮ್ಮ ಸರಳತೆ ಮೆರೆದಿದ್ದು, ಆ ಎರಡು ಸೆಕೆಂಡುಗಳು ಇಡಿಯ ಅಮೆರಿಕನ್ನರ ಮನಗೆದ್ದಿದೆ.
ಹೌದು… ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿಯವರು ಇಂದು ಟೆಕ್ಸಾಸ್’ನ ಹೂಸ್ಟನ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅಲ್ಲಿನ ಗಣ್ಯಾತಿಗಣ್ಯರು ಮೋದಿಯವರಿಗೆ ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ತಮ್ಮ ಸರಳತೆಯನ್ನು ಮತ್ತೊಮ್ಮೆ ವಿಶ್ವಕ್ಕೆ ಪ್ರದರ್ಶಿಸಿದ ಅವರು ಎಲ್ಲರ ಮನಗೆದ್ದಿದ್ದಾರೆ.
ಪ್ರಧಾನಿಯಾದಾಗ ಆರಂಭಿಸಿದ ಸ್ವಚ್ಛತಾ ಅಭಿಯಾನವನ್ನು ಮೋದಿಯವರು ತಾವು ಹೋದೆಡೆಯೆಲ್ಲಾ ಉಲ್ಲೇಖಿಸುತ್ತಾ, ಸ್ವಚ್ಛ ಭಾರತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಲೇ ಇದ್ದಾರೆ. ಇದು ದೇಶದಲ್ಲಿ ವ್ಯಾಪಕ ಬದಲಾವಣೆಗೂ ಸಹ ಕಾರಣವಾಗಿರುವುದು ತಿಳಿದೇ ಇದೆ.
ಆದರೆ, ಈಗ ಅಮೆರಿಕಾ ಪ್ರವಾಸದಲ್ಲಿರುವ ಮೋದಿಯವರನ್ನು ಹೂಸ್ಟನ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಗಣ್ಯರು ಅದ್ದೂರಿ ಹಾಗೂ ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ, ಮೋದಿಯವರನ್ನು ಸ್ವಾಗತಿಸಲು ಸಾಲಿನಲ್ಲಿ ನಿಂತಿದ್ದ ಮಹಿಳಾ ಗಣ್ಯರೊಬ್ಬರು ಹೂಗುಚ್ಛ ನೀಡಿ ಶುಭ ಕೋರಿದರು. ಹೂಗುಚ್ಛ ನೀಡುವ ವೇಳೆ ಅದರಿಂದ ಒಂದೆರಡು ಕಡ್ಡಿಗಳು ಹಾಗೂ ದಳಗಳು ಕೆಳಕ್ಕೆ ಉದುರುತ್ತವೆ.
#WATCH United States: PM Narendra Modi arrives in Houston, Texas. He has been received by Director, Trade and International Affairs, Christopher Olson and other officials. US Ambassador to India Kenneth Juster and Indian Ambassador to the US Harsh Vardhan Shringla also present. pic.twitter.com/3CqvtHkXlk
— ANI (@ANI) September 21, 2019
ಇದನ್ನು ಗಮನಿಸಿದ ಮೋದಿಯವರು ತಾವೇ ಸ್ವತಃ ಅದನ್ನು ಅಲ್ಲಿಂದ ಎತ್ತಿ ತಮ್ಮ ಸಿಬ್ಬಂದಿಗಳಿಗೆ ನೀಡಿ, ಆ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ.
ಮೋದಿಯವರನ್ನು ಸ್ವಾಗತಿಸುವ ಈ ದೃಶ್ಯವನ್ನು ಪ್ರಪಂಚದ ಬಹಳಷ್ಟು ಮಾಧ್ಯಮಗಳು ನೇರಪ್ರಸಾರ ಮಾಡುತ್ತಿದ್ದವು. ಹೀಗಾಗಿ, ಭಾರತದ ಪ್ರಧಾನಿಯವರ ಈ ಸರಳತೆ ಹಾಗೂ ಸ್ವಚ್ಛತೆ ಕುರಿತಾಗಿ ಹೊಂದಿರುವ ಕಾಳಜಿಯನ್ನು ಕಂಡು ಅಮೆರಿಕನ್ನರು ಮಾತ್ರವಲ್ಲ ವಿಶ್ವದ ಅನೇಕ ದೇಶಗಳು ಹಾಗೂ ಗಣ್ಯಾತಿಗಣ್ಯರು ಆಶ್ಚರ್ಯ ಚಕಿತರಾಗಿದ್ದು ಮಾತ್ರವಲ್ಲ, ಇದೊಂದು ಮಾದರಿ ಎಂದು ಪ್ರಶಂಸಿಸಿದ್ದಾರೆ.
Discussion about this post