ನವದೆಹಲಿ: ಕೇರಳ ಹಾಗೂ ಕೊಡಗಿನಲ್ಲಿ ಮಳೆ ಹಾಗೂ ಪ್ರವಾಹದ ಆರ್ಭಟಕ್ಕೆ ಬದುಕು ದುಸ್ತರವಾಗಿರುವಂತೆಯೇ, ಪ್ರಸಕ್ತ ವರ್ಷ ಈ ಭಾರಿ ದೇಶದಾದ್ಯಂತ ವರುಣದ ಆರ್ಭಟಕ್ಕೆ 1074 ಮಂದಿ ಬಲಿಯಾಗಿದ್ದಾರೆ.
ಈ ಕುರಿತಂತೆ ಕೇಂದ್ರ ಗೃಹ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಆ.26ರವರೆಗೂ ಒಟ್ಟು ದೇಶದಲ್ಲಿ 1074 ಸಾವನ್ನಪ್ಪಿದ್ದು, 443 ಮಂದಿ ಕೇರಳವೊಂದರಲ್ಲೇ ಬಲಿಯಾಗಿದ್ದಾರೆ.
ಕರ್ನಾಟಕದಲ್ಲಿ 166, ಉತ್ತರ ಪ್ರದೇಶದಲ್ಲಿ 218, ಪಶ್ಚಿಮ ಬಂಗಾಳದಲ್ಲಿ 198 ಹಾಗೂ ಅಸ್ಸಾಂನಲ್ಲಿ 49 ಮಂದಿ ಬಲಿಯಾಗಿದ್ದಾರೆ.
ಇನ್ನು, ಗೃಹ ಇಲಾಖೆಯ ವರದಿಯಂತೆ ಭಾರೀ ಮಳೆ ಹಾಗೂ ಪ್ರವಾಹದಿಂದ ದೇಶದಾದ್ಯಂತ 17,14,863 ಮಂದಿ ಸೂರು ಕಳೆದುಕೊಂಡು ಸಂತ್ರಸ್ತರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.
Discussion about this post