ನವದೆಹಲಿ: ದುಬೈನಲ್ಲಿ ನಡೆದ ಭಾರತ ಹಾಗೂ ಪಾಕಿಸ್ಥಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿದ ಭಾರತದ ತ್ರಿವರ್ಣ ಧ್ವಜವನ್ನು ಪಾಕಿಸ್ಥಾನದ ಯುವತಿ ಹಾರಿಸಿ, ಸಂಭ್ರಮಿಸಿದ್ದು ವೈರಲ್ ಆಗಿದೆ.
ಬುರ್ಖಾ ತೊಟ್ಟಿದ್ದ ಪಾಕಿಸ್ಥಾನದ ಯುವತಿಯೊಬ್ಬಳು ಭಾರತ ಗೆಲುವು ದಾಖಲಿಸಿದ್ದನ್ನು ಕಂಡ ತತಕ್ಷಣ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾಳೆ.
और इसी बीच प्रेक्षक गैलरी से आवाज़ आई…
"एक कैच नही ले पाते हो…और ख्वाब कश्मीर पाने का रखते हो"#INDvPAK pic.twitter.com/lXlkjVJQ9O
— Dhaval Acharya BJP (@Dhaval_BJP) September 24, 2018
ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ಥಾನದ ವಿರುದ್ದ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಭಾರತದ ಜಯ ದಾಖಲಾದ ತತಕ್ಷಣ ಬುರ್ಖಾ ಧರಿಸಿದ್ದ ಯುವತಿ ಭಾರತದ ತ್ರಿವರ್ಣ ಧ್ವಜವನ್ನು ಸಂಭ್ರಮದಿಂದ ಹಾರಿಸಿದ್ದಾಳೆ. ಯುವತಿಯ ಈ ನಡೆಯಿಂದ ಆಶ್ಚರ್ಯಗೊಂಡ ಅಕ್ಕಪಕ್ಕದವರು ಕುತೂಹಲ ಹಾಗೂ ಕೋಪದಿಂದ ಆಕೆಯನ್ನು ನೋಡಿದ್ದಾರೆ. ಆದರೂ ಸಹ ಆಕೆ ಹಿಂಜರಿಯದೇ ಧ್ವಜ ಹಾರಿಸಿ, ಸಂಭ್ರಮಿಸಿದ್ದಾಳೆ.
Discussion about this post